






ಮೊಗ್ರು: ಆ.1ರಂದು ಸುರಿದ ವಿಪರೀತ ಮಳೆಯಿಂದ ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ಮೊಗ್ರು ಗ್ರಾಮದ ಮುಗೇರಡ್ಕ ವ್ಯಾಪ್ತಿಯ ದಂಬೆತ್ತಿಮಾರು, ಬರಮೇಲೂ, ಪರಾರಿ, ನೈಮಾರು ಹಾಗೂ ಇನ್ನೂ ಅನೇಕ ಕಡೆಯ ಅಡಿಕೆ, ತೆಂಗು, ಬಾಳೆ, ಕೊಕ್ಕೋ, ಕಾಳುಮೆಣಸು, ತರಕಾರಿ ಕೃಷಿಗೆ ನೀರು ನುಗ್ಗಿ ಜಲಾವೃತಗೊಂಡು ನಷ್ಟ ಉಂಟಾಗಿದೆ.












