ವಿದ್ಯಾನಗರದಿಂದ ಅಜಿತ್ ನಗರಕ್ಕೆ ಸಂಪರ್ಕಿಸುವ ಬ್ರಿಡ್ಜ್ ಮುಳುಗಡೆ

0

ಬೆಳ್ತಂಗಡಿ: ವಿದ್ಯಾನಗರದಿಂದ ಅಜಿತ್ ನಗರಕ್ಕೆ ಸಂಪರ್ಕಿಸುವ ಬ್ರಿಡ್ಜ್ ಮುಳುಗಡೆ ಆಗಿ ರಸ್ತೆ ಸಂಚಾರ ಸ್ತಬ್ದವಾಗಿದೆ. ಕಳೆದ ಮಳೆಗೆ ಈ ಬ್ರಿಡ್ಜ್ ಬಿರುಕು ಬಿಟ್ಟು ಬ್ರಿಡ್ಜ್ ನ ಒಳಗಡೆ ಗೋಲಾಕಾರವಾಗಿತ್ತು. ಅದಕ್ಕೆ ತೇಪೆ ಹಚ್ಚುವ ರೀತಿಯಲ್ಲಿ ಸ್ವಲ್ಪ ಮಣ್ಣು ತುಂಬಿಸಿ ಕಲ್ಮಂಜ ಪಂಚಾಯತ್ ಕೈ ತೊಳೆದುಕೊಂಡಿತ್ತು. ಘನ ವಾಹನ ಓಡಾಟವನ್ನು ನಿರ್ಭoಧಿಸಲಾಗಿತ್ತು.

ಈಗ ರಸ್ತೆಯ ಕಾಂಕ್ರೀಟ್ ಬಿರುಕು ಬಿಟ್ಟಿದೆ ಮತ್ತು ಮಳೆಗೆ ಬ್ರಿಡ್ಜ್ ಕೂಡ ಬಿರುಕುಬಿಟ್ಟು ಸಂಪೂರ್ಣ ಮುಳುಗಡೆ ಆಗಿದೆ. ಈ ಹಿಂದೆಯೂ ಕಳೆದ ವರ್ಷ ಮಳೆಗಾಲದಲ್ಲಿ ಗ್ರಾಮಸ್ಥರು ಗ್ರಾಮ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ದೂರು ನೀಡಿದ್ದರು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಸಂಬಂಧ ಪಟ್ಟ ಅಧಿಕಾರಿಗಳು. ವಿದ್ಯಾನಗರ ಟೂ ಅಜಿತ್ ನಗರ ಸಂಪರ್ಕ ಕಡಿತಗೊಂಡಿದೆ.

ಬೆಳ್ತಂಗಡಿ ಟೂ ಚಾರ್ಮಾಡಿ ರಸ್ತೆಯ ಅನುಗ್ರಹ ಕಾಲೇಜು ಬಳಿ ರಸ್ತೆ ಸಂಪರ್ಕ ಕೆಲ ಗಂಟೆಗಳ ಕಾಲ ಸ್ಥಬ್ದವಾಗಿದ್ದಾಗ ವಾಹನಗಳು ಇದೇ ರಸ್ತೆಯ ಮೂಲಕ ಉಜಿರೆ ಹಾಗೂ ಧರ್ಮಸ್ಥಳಕ್ಕೆ ಸಂಪರ್ಕ ಸೇತುವಾಗಿತ್ತು. ಉಜಿರೆ ಪೇಟೆಯಿಂದ ಎಸ್. ಡಿ. ಎಂ ಆಸ್ಪತ್ರೆಯ ಹಿಂದುಗಡೆಯಾಗಿ ಬಂದು ಉಜಿರೆ ಗ್ರಾಮದ ಕಲ್ಲೆ ಬೈಲಿನ ಮೂಲಕ ಹರಿದು ಬಂದು ಕಲ್ಮಂಜ ಗ್ರಾಮದಲ್ಲಿ ಹರಿದು ಹೊಳೆಗೆ ಸೇರುತ್ತದೆ.

LEAVE A REPLY

Please enter your comment!
Please enter your name here