






ಲಾಯಿಲ ಗ್ರಾಮದ ಅಂಕಾಜೆ ಎಂಬಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಮಳೆಗಾಲದಲ್ಲಿ ಪಾಚಿ ಹಿಡಿದು ಜನರು , ವಾಹನ ಸಂಚರಿಸಲು ಅಸಾಧ್ಯವಾಗಿತ್ತು. ಇದನ್ನು ಗಮನಿಸಿ ಕುಮಯಿ(ಸುಣ್ಣದ ಹುಡಿ) ಹಾಕಿ ಲಾಯಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ , ಪತ್ರಕರ್ತ ಪ್ರಸಾದ್ ಶೆಟ್ಟಿ ಏಣಿಂಜೆ ಸ್ವಚ್ಛಗೊಳಿಸಿದರು.



ಲಾಯಿಲ ಗ್ರಾಮದ ಅಂಕಾಜೆ ನಿವೇಶನ ಬಡಾವಣೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು , ಇಲ್ಲಿನ ಸಂಪರ್ಕದ ಕಾಂಕ್ರೀಟ್ ರಸ್ತೆ ಮಳೆಗಾಲದಲ್ಲಿ ಪಾಚಿ ಹಿಡಿದು ಜಾರುತ್ತಿತ್ತು. ಕೆಲವರು ಬಿದ್ದು , ಗಾಯಗೊಂಡಿದ್ದರು . ಈ ವಿಚಾರ ಗಮನಿಸಿದ ಪಂಚಾಯತ್ ಮಾಜಿ ಸದಸ್ಯ , ಪತ್ರಕರ್ತ ಪ್ರಸಾದ್ ಶೆಟ್ಟಿ ಏಣಿಂಜೆಯವರು ತನ್ನ ಸ್ವಂತ ಹಣದಿಂದ 10 ಕೆಜಿಯಷ್ಟು ಕುಮಯಿ(ಸುಣ್ಣದ ಹುಡಿ) ಹಾಕಿ ಕಾಂಕ್ರೀಟ್ ರಸ್ತೆಯಲ್ಲಿ ಹಿಡಿದಿದ್ದ ಪಾಚಿ ತೆಗೆದು ಸ್ವಚ್ಛಗೊಳಿಸಿದರು.
ಸ್ಥಳೀಯರಾದ ತಂಗಚ್ಚನ್ ಸಹಕರಿಸಿದರು. ಪ್ರಸಾದ್ ಶೆಟ್ಟಿಯವರ ಈ ಸಾಮಾಜಿಕ ಸೇವೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.









