







ಬೆಳ್ತಂಗಡಿ : ತಾಲೂಕಿನ ತೆಕ್ಕಾರು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಚಿರತೆ ಸಂಚಾರ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಭೀತಿ ಆವರಿಸಿದೆ. ತಕ್ಷಣವೇ ಅದನ್ನು ಸೆರೆಹಿಡಿಯುವಂತೆ ಆಗ್ರಹಿಸಿ ಉಪ್ಪಿನಂಗಡಿ ಅರಣ್ಯ ಇಲಾಖೆಗೆ ತೆಕ್ಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಅದ್ದು ಮನವಿ ಮಾಡಿದ್ದಾರೆ.



ಸಾಂದರ್ಭಿಕ ಚಿತ್ರ
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ದಿನಗಳಿಂದ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರು ಹಾಗೂ ರೈತರ ನಿದ್ದೆಗೆಡಿಸಿದೆ.ನಾಗರಿಕರು ರಸ್ತೆಯಲ್ಲಿ ಹೋಗುವಾಗ ಚಿರತೆ ಪ್ರತ್ಯಕ್ಷ ವಾಗಿದೆ .ಸಾರ್ವಜನಿಕರು ಮೇಲೆ ಯಾವುದೇ ಜೀವಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆಯು ಚಿರತೆಯನ್ನು ಬೋನು ಹಾಕಿ ಸೆರೆಹಿಡಿಯಬೇಕೆಂದು ಉಪ್ಪಿನಂಗಡಿ ಅರಣ್ಯ ಇಲಾಖೆಗೆ ತೆಕ್ಕಾರು ಗ್ರಾ.ಪಂ ಮಾಜಿ ಅಧ್ಯಕ್ಷರು ಅಬ್ದುಲ್ ರಝಾಕ್ ಅದ್ದು ಮನವಿ ಸಲ್ಲಿಸಿದ್ದಾರೆ.








