







ಬಳಂಜ.ಬೆಳ್ತಂಗಡಿ ತಾಲೂಕಿನ ಬಳಂಜ ಮತ್ತು ನಾಲ್ಕೂರಿನ ಆರು ಮಂದಿ ಯುವ ಸಾಧಕರು ಇತಿಹಾಸ ಪ್ರಸಿದ್ಧವಾದ ಜಮ್ಮು ಕಾಶ್ಮೀರದ ಅಮರನಾಥ ಯಾತ್ರೆಯನ್ನು ಕೈಗೊಂಡು ಹಿಮದಿಂದ ರೂಪುಗೊಳ್ಳುವ ಪವಿತ್ರ ಶಿವಲಿಂಗದ ದರ್ಶನವನ್ನು ಪಡೆದು ಧನ್ಯತೆಯನ್ನು ಪಡೆದರು.
ಸುಮಾರು 11500 ಅಡಿ ಎತ್ತರದಲ್ಲಿರುವ ಮಂಜಿನ ಶಿವಲಿಂಗವನ್ನು 48 ಕಿಲೋಮೀಟರ್ ದೂರವನ್ನು ಕೇವಲ ಹಾಲ್ನಡಿಗೆಯಲ್ಲಿ ಕ್ರಮಿಸಿ ದರ್ಶನವನ್ನು ಪಡೆಯಲಾಯಿತು ಎಂದು ತಿಳಿಸಿರುವ ಯಾತ್ರಾರ್ಥಿಗಳು,ದಾರಿಯುದಕ್ಕೂ ಹಿಮ ಶಿಖರಗಳನ್ನು ಕಣ್ತುಂಬಿಸಿಕೊಂಡು ಕಣಿವೆಯುವುದಕ್ಕೂ ಹಿಮದ ಹಾದಿಯಲ್ಲಿ ನಡೆಯುವ ಸನ್ನಿವೇಶ ತುಂಬಾ ಆಹ್ಲಾದಕರವಾಗುತ್ತದೆ ಎಂದು ಹೇಳುತ್ತಾರೆ.


ಅಮರನಾಥ ನ ದರ್ಶನದ ನಂತರ ಕಾಶ್ಮೀರದಲ್ಲಿರುವ ಪೆಹಲ್ಗಾಂ,ಶ್ರೀನಗರ್ ಬಾಲ್ಟನ್,ಇತರ ಪ್ರೇಕ್ಷಣೀಯ ಸ್ಥಳಗಳ ಜೊತೆಗೆ ಜಮ್ಮುವಿನಲ್ಲಿರುವ ವೈಷ್ಣವಿ ದೇವಿಯ ದರ್ಶನವನ್ನು 25 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಪಡೆದರು . ಪಾಕಿಸ್ತಾನದ ಗಡಿ ಭಾಗದಲ್ಲಿರುವ ಶಿವಕೋರಿ ದೇವಸ್ಥಾನ ಹಾಗೂ ಗಡಿ ಭಾಗದಲ್ಲಿ ಹರಿಯುತ್ತಿರುವ ಚೀನಾ ಬ ನದಿ ಪ್ರದೇಶವನ್ನು ಇದೇ ಸಂದರ್ಭದಲ್ಲಿ ವೀಕ್ಷಿಸಲಾಯಿತು.
ಇದಲ್ಲದೇ ದೆಹಲಿಯ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳು ಪ್ರಸಕ್ತ ರಾಜ ತಾಂತ್ರಿಕ ಸ್ಥಳಗಳನ್ನುವೀಕ್ಷಿಸಲಾಯಿತು.ಯಾತ್ರೆಯಲ್ಲಿ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನಮ್ಮ ಮಾರ್ಗದರ್ಶಕರಾಗಿ ಬಂಟ್ವಾಳದ ಸೀಯುತ ಸಂತೋಷ್ ಕುಮಾರ್ ಇವರು ಪೂರ್ಣ ಪ್ರಮಾಣದ ಸಹಕಾರವನ್ನು ನೀಡಿದರು. ಇದಲ್ಲದೆ ಅವರು ಅಮರನಾಥ ಯಾತ್ರೆಯನ್ನು ಯಾವುದೇ ಪ್ಯಾಕೇಜ್ ಇಲ್ಲದೆ ವರ್ಷಂಪತಿ ನಡೆಸುತ್ತಿದ್ದಾರೆ. ಹೆಚ್ಚಿನ ಜನರನ್ನು ಅಮರ್ನಾಥ ಯಾತ್ರೆ ಮಾಡಿಸುವ ಒಂದೇ ಉದ್ದೇಶ ಹೊಂದಿರುವ ಸಂತೋಷ್ ಕುಮಾರ್ ರವರಂತ ಹ ಅನುಭವುಳ್ಳ ಮಾರ್ಗದರ್ಶಕರು ನಮಗೆ ಸಿಕ್ಕಿದ ಫಲವಾಗಿ ನಮ್ಮ ಯಾತ್ರೆ ಯಶಸ್ವಿಯಾಗಿದೆ ಎಂದು ಯಾತ್ರಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಅಮರನಾಥ ಯಾತ್ರೆಯಲ್ಲಿ ದಿನೇಶ್ ಪೂಜಾರಿ ಕುದ್ರೋಟ್ಟು ನಾಲ್ಕೂರು,ಸತೀಶ್ ಕೆ ಕಾಂತಾಜೆ ಬಳಂಜ,ಸಂತೋಷ್ ಶೆಟ್ಟಿ ಅಲ್ಲಂದೋಡಿ ಪಡಂಗಡಿ,ದುಗ್ಗಯ್ಯ ಪೂಜಾರಿ ಹುಂಬೇಜೆ ನಾಲ್ಕೂರು, ಸಂತೋಷ್ ದೇವಾಡಿಗ ಕೊಂಗುಲ ಬಳಂಜ,ಪ್ರವೀಣ್ ಪೂಜಾರಿ ಲಾಂತ್ಯಾರ್ ಬಳಂಜ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.









