ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ನೂತನ ತಹಸೀಲ್ದಾರ್ ನರಗುಂದ ಭೇಟಿ

0

ಬೆಳ್ತಂಗಡಿ : ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಘಟಕದ ನೇತೃತ್ವದಲ್ಲಿ, ಎಲ್ಲಾ ವೃಂದ ಸಂಘಟನೆಗಳ ಸಹಭಾಗಿತ್ವದಲ್ಲಿ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ, ತಾಲೂಕಿನ ನೂತನ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿಕೊಂಡ ಎಸ್.ಎನ್. ನರಗುಂದ ಇವರನ್ನು ಭೇಟಿಯಾಗಿ ಸ್ವಾಗತಿಸಲಾಯಿತು.

ಎ ಡಿ ಎಲ್ ಆರ್ ಆಗಿರುವ ಲೀಲಾವತಿ, ತಾಲೂಕು ಉಪ ಖಜಾನಾಧಿಕಾರಿ ಮತ್ತು ಸಂಘದ ನಿರ್ದೇಶಕಿ ಹರಿಣಾಕ್ಷಿ ಆಸೀನರಾಗಿದ್ದರು. ತಾಲೂಕು ಸಂಘದ ಅಧ್ಯಕ್ಷ ಜಯರಾಜ್ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನಾಡಿದರು. ದಂಡನಾಧಿಕಾರಿಗಳಿಗೆ ಶಾಲು ಹಾರ, ಹೂಗುಚ್ಛವನ್ನು ನೀಡಿ ಸ್ವಾಗತಿಸಲಾಯಿತು. ಎಲ್ಲಾ ವೃಂದ ಸಂಘಟನೆಗಳ ಅಧ್ಯಕ್ಷರುಗಳು ಗುಲಾಬಿ ಹೂವನ್ನು ನೀಡಿ ಸ್ವಾಗತಿಸಿದರು. ಕಾರ್ಯದರ್ಶಿ ವಿಕಾಸ್ ಕುಮಾರ್ ವೈ. ವಂದಿಸಿದರು.

LEAVE A REPLY

Please enter your comment!
Please enter your name here