ವಿಜಯ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ಸ್ಥಳಾಂತರಿತ ಉರ್ವ ಮಾರ್ಕೆಟ್ ಶಾಖೆ ಉದ್ಘಾಟನೆ

0

ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್ ಶಾಖೆ ಉರ್ವದ ಎಂ.ಎಸ್.ಸಿ.ಎಲ್. ಇಂಡೋರ್‌ ಸ್ಟೇಡಿಯಂ ಕಟ್ಟಡದಲ್ಲಿ ಜು.13 ರಂದು ಉದ್ಘಾಟನೆಗೊಂಡಿತು.

ನೂತನ ಶಾಖೆ ಉದ್ಘಾಟಿಸಿದ ಶ್ರೀ ದೇವಿ ಶಿಕ್ಷಣ ಸಮೂಹ ಸಂಸ್ಥೆ ಹಾಗೂ ಮಂಗಳೂರು ಕ್ವಾಲಿಟಿ ಗ್ರೂಪ್ ಆಫ್ ಹೊಟೇಲ್ಸ್ ಅಧ್ಯಕ್ಷ ಡಾ| ಎ. ಸದಾನಂದ ಶೆಟ್ಟಿ ಮಾತನಾಡಿ, ಸೊಸೈಟಿ ಆರಂಭಗೊಂಡು ಅಲ್ಪಾವಧಿಯಲ್ಲಿ ದೊಡ್ಡ ಸಾಧನೆ ಮಾಡಿದೆ. 21 ಶಾಖೆಗಳನ್ನು ಆರಂಭಿಸಿ ಕರಾವಳಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯಾಗಿದೆ. ಇನ್ನಷ್ಟು ಶಾಖೆಗಳು ಆರಂಭಗೊಂಡು ಹೆಚ್ಚಿನ ಜನತೆಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಶುಭಹಾರೈಸಿದರು.

ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್ ಕೋಡಿಕಲ್ ಮಾತನಾಡಿ, ಒಳ್ಳೆಯ ಘಳಿಗೆಯಲ್ಲಿ ಜಯರಾಮ ಶೆಟ್ಟಿಯವರು ಸೊಸೈಟಿ ಆರಂಭಿಸಿದರು. ಇದರಿಂದಾಗಿ ವೇಗವಾಗಿ 21 ಶಾಖೆಗಳು ಜನರ ಸೇವೆಗೆಸಿಕ್ಕಿವೆ. ಇದರ ಹಿಂದೆ ಎಲ್ಲನಿರ್ದೇಶಕರು, ಆಡಳಿತ ಮಂಡಳಿ ಹಾಗೂ ಸಿಬಂದಿಯ ಶ್ರಮವಿದೆ ಎಂದರು.

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನ ಕೆರೆ ಸ್ಥಾಪಕಾಧ್ಯಕ್ಷ ಎಸ್. ಜಯರಾಮ ಶೆಟ್ಟಿ ಮಾತನಾಡಿ 2005 ರಲ್ಲಿ ಗುರುವಾಯನ ಕೆರೆಯಲ್ಲಿ ಪ್ರಾರಂಭಗೊಂಡ ಸೊಸೈಟಿ ಈಗಾಗಲೇ 21 ಶಾಖೆಗಳನ್ನು ಹೊಂದಿದ್ದು, ಶೀಘ್ರದಲ್ಲೇ ಅತ್ತಾವರ ಹಾಗೂ ಕಾಪುವಿನಲ್ಲಿ ನೂತನ ಶಾಖೆ ಆರಂಭಿಸಲಾಗುವುದು ಎಂದರು. ದ. ಕ. ಬ್ಯಾಡ್ಮಿಂಟನ್ ಅಸೋಸಿಯೇಶನ್ ಮಂಗಳೂರು ಅಧ್ಯಕ್ಷ ಸಂತೋಷ್ ಕುಮಾರ್‌ಶೆಟ್ಟಿ ಶುಭ ಹಾರೈಸಿದರು.ಸೊಸೈಟಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕೆ., ನಿರ್ದೇಶಕರಾದ ಎಸ್.ಜಯರಾಮ ಶೆಟ್ಟಿ ಸೀತಾರಾಮ ಶೆಟ್ಟಿ ಬಿ., ಬಾಲಕೃಷ್ಣ ಪೂಂಜಾ ಎಚ್., ಪುಷ್ಪರಾಜ್ ಶೆಟ್ಟಿ ರಘುರಾಮ ಶೆಟ್ಟಿ ಎ. ಸಾಧನಾ, ಕೃಷ್ಣರೈ ಟಿ., ಎಂ.ಜಯರಾಮ ಭಂಡಾರಿ ಧರ್ಮಸ್ಥಳ, ಪುರಂದರ ಶೆಟ್ಟಿ ಪಾಡ್ಯಾರು, ಮಂಜುನಾಥ ರೈ ಏನ್ , ರಾಜು ಶೆಟ್ಟಿ ಬೆಂಗತ್ಯಾರು, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಸಾರಿಕ ಶೆಟ್ಟಿ ವಿಜಯ ಬಿ. ಶೆಟ್ಟಿ ಪ್ರಾದೇಶಿಕ ಪ್ರಬಂಧಕರಾದ ಸಂತೋಷ್ ಕುಮಾರ್ ಮತ್ತು ಅಜಿತ್ ಶೆಟ್ಟಿ ಶಾಖಾ ಪ್ರಬಂಧಕ ದಿನಕರ್‌ರೈ ಡಿ. ಮತ್ತು ಸಿಬಂದಿವರ್ಗ ಉಪಸ್ಥಿತರಿದ್ದರು.

ನಿರ್ದೇಶಕ ರಘುರಾಮ್ ಶೆಟ್ಟಿ ಎ. ಸ್ವಾಗತಿಸಿ, ಸಿಇಒ ಸುಜಯ್ ಶೆಟ್ಟಿ ವಂದಿಸಿದರು.ಸೊಸೈಟಿಯ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕೊರ್ಯಾರು ಮಾತನಾಡಿ, 712 ಕೋ. ರೂ. ವಹಿವಾಟು ನಡೆಸಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಮಾನವಾದ ಸೇವೆ ನೀಡುವಲ್ಲಿ ಸಾವಿರಾರು ಸದಸ್ಯರು, ಠೇವಣಿದಾರರು, ಗ್ರಾಹಕರು, ಆಡಳಿತ ಮಂಡಳಿ ಹಾಗೂ ಸಿಬಂದಿಯ ಶ್ರಮವಿದೆ. ಹಿಂದಿನ ಸಾಲಿನಲ್ಲಿ 5.05 ಕೋ. ರೂ. ನಿವ್ವಳ ಲಾಭಗಳಿಸಿದ್ದು, ಈ ವರ್ಷ 1000 ಸಾವಿರ ಕೋಟಿ ವ್ಯವಹಾರ ಮಾಡಿ 500 ಕೋಟಿ ಡಿಪಾಸಿಟ್ 400 ಕೋಟಿ ಸಾಲ ನೀಡುವ ಗುರಿ ಇದೆ. ಆಡಿಟ್ ವರ್ಗೀಕರಣದಲ್ಲಿ ಎ ಶ್ರೇಣಿ ಹೊಂದಿದೆ. ಪ್ರಸ್ತುತ ಸೊಸೈಟಿಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ. 10.25 ಬಡ್ಡಿದರ, ವಿಜಯ ಸಮೃದ್ಧಿ ಠೇವಣಿಗೆ ಶೇ. 9.25, ನಿರಕು ಠೇವಣಿ 1 ವರ್ಷ ಮೇಲ್ಪಟ್ಟವರಿಗೆ ಶೇ. 9.50 ಬಡ್ಡಿದರ ಸಿಗಲಿದೆ. ಆಕರ್ಷಕ ಬಡ್ಡಿದರದಲ್ಲಿ ಪ್ರತಿ ಗ್ರಾಂಗೆ ಗರಿಷ್ಠಮೊತ್ತದ ಚಿನ್ನಾಭರಣ ಈಡಿನ ಸಾಲ ಲಭ್ಯವಿದೆ. ಆರ್. ಡಿ. ಮೇಲಿನ ಆಕರ್ಷಕ ಬಡ್ಡಿದರಗಳನ್ನು ನೀಡಲಾಗುತ್ತಿದೆ ಎಂದರು.

LEAVE A REPLY

Please enter your comment!
Please enter your name here