ನಾರಾವಿಯಲ್ಲಿ ಗಾಯತ್ರಿ ಮೆಡಿಕಲ್ಸ್ ಶುಭಾರಂಭ

0

ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸೇವೆಯನ್ನು ಇನ್ನಷ್ಟು ಸುಲಭಗೊಳಿಸುವ ಉದ್ದೇಶದಿಂದ ನಾರಾವಿ ಪಂಚಮಿ ವಾಣಿಜ್ಯ ಸಂಕೀರ್ಣದಲ್ಲಿ ಗಾಯತ್ರಿ ಮೆಡಿಕಲ್ಸ್ ಜು.೩ರಂದು ಶುಭಾರಂಭಗೊಂಡಿದೆ.

ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ನಾರಾವಿ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ಸದಸ್ಯ ಶ್ರೀನಿವಾಸ್ ಕಿಣಿ, ಪ್ರಧಾನ ಅರ್ಚಕ ಕೃಷ್ಣ ತಂತ್ರಿ, ಪಂಚಮಿ ವಾಣಿಜ್ಯ ಕಾಂಪೆಕ್ಸ್‌ನ ಮಾಲಕ ಸತೀಶ್ ಆಚಾರ್ಯ, ರಾಜೇಶ್ ಆಚಾರ್ಯ, ನಾರಾವಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಪೂಜಾರಿ, ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಸುಧಾಕರ್ ಭಂಡಾರಿ, ನಿರ್ದೇಶಕಿ ಯಶೋದಾ, ಬೆಳ್ತಂಗಡಿ ನಾರಾಯಣ ಗುರು ಸೇವಾ ಸಮಿತಿಯ ನಿರ್ದೇಶಕ ನಾರಾಯಣ ಪೂಜಾರಿ, ನಾರಾವಿ ಗ್ರಾಮ ಪಂಚಾಯತ್ ಮಾಜಿ ಸದಸ್ಯಉದಯ್ ಹೆಗ್ಡೆ, ಪ್ರಮುಖರಾದ ಜೀನೇಶ್ ಜೈನ್, ದಿವಾಕರ ಭಂಡಾರಿ, ಮರೋಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸೇಸಪ್ಪ ಪೂಜಾರಿ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.

ಸಂಸ್ಥೆಯ ಮಾಲಕರ ಕುಟುಂಬಸ್ಥರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಸುನಂದ ಸುಂದರ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.ಆರೋಗ್ಯದ ಕಾಳಜಿ ಮತ್ತು ಉತ್ತಮ ಸೇವೆಯನ್ನು ಪ್ರಧಾನ ಉದ್ದೇಶವನ್ನಾಗಿ ಮಾಡಿಕೊಂಡು ಆರಂಭವಾಗುತ್ತಿರುವ ಈ ಮೆಡಿಕಲ್‌ನಲ್ಲಿ ಜನರಿಗೆ ಅಗತ್ಯವಿರುವ ಎಲ್ಲಾ ರೀತಿಯ ಔಷಧಿಗಳು ಮತ್ತು ಆರೋಗ್ಯ ಸಂಬಂಧಿತ ಉತ್ಪನ್ನಗಳು ದೊರೆಯಲಿದೆ.

ಆರೋಗ್ಯವೇ ನಿಜವಾದ ಸಂಪತ್ತು. ಸಣ್ಣ ಆರೋಗ್ಯ ಸಮಸ್ಯೆಗಳನ್ನೂ ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮತ್ತು ಔಷಧಿ ಸೇವನೆ ಮಾಡುವುದು ಮುಖ್ಯ. ನಾರಾವಿ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಸುಲಭ ಸಮಯದಲ್ಲಿ ಔಷಧಗಳು ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಲಭ್ಯವಿರುವ ಔಷಧಿ: ಎಲ್ಲಾ ರೀತಿಯ ವೈದ್ಯಕೀಯ ಔಷಧಿಗಳು, ಮಕ್ಕಳ ಮತ್ತು ಹಿರಿಯರ ಔಷಧಿಗಳು, ಆರೋಗ್ಯ ಮತ್ತು ಆರೈಕೆ ಉತ್ಪನ್ನಗಳು, ವೈದ್ಯರ ಸಲಹೆಯ ಔಷಧಿಗಳು, ಗುಣಮಟ್ಟದ ಸೇವೆ ಮತ್ತು ಗ್ರಾಹಕ ಸ್ನೇಹಿ ವ್ಯವಸ್ಥೆ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here