ಮರೋಡಿ ಕೂಕ್ರಬೆಟ್ಟು ಶಾಲೆಗೆ ನೂತನ ಬಸ್ ಹಸ್ತಾಂತರ

0

ಮರೋಡಿ: ಇಲ್ಲಿನ ಕೂಕ್ರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಇಂದು(ಜು. 9)ಶಾಲೆ ಬಸ್ ಹಸ್ತಾಂತರ ಮಾಡಲಾಯಿತು.

ಅರಸಿನ ಮಕ್ಕಿ,ಪಲಾರಗೋಳಿ,ಕೂಕ್ರಬೆಟ್ಟು,ಮರೋಡಿ ಮಾರ್ಗವಾಗಿ ಸಂಚರಿಸುಚ ವಿದ್ಯಾರ್ಥಿಗಳಿಗೆ ಇದು ನೆರವಾಗಲಿದೆ. ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಅಂಚನ್ ರವರ ಸಹಕಾರ, ಅಧ್ಯಕ್ಷ ಜಯಂತ್ ಕೋಟ್ಯಾನ್, ಕಾರ್ಯದರ್ಶಿ ನಾರಾಯಣ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಉಚ್ಚೂರು, ಮುಖ್ಯೋಪಾಧ್ಯಾಯರಾದ ಸುಫಲ, ಮಾಜಿ ಗ್ರಾ.ಪಂ.ಅಧ್ಯಕ್ಷ ಎಂ ಎಸ್ ಪೂಜಾರಿ, ಮಾಜಿ ಸದಸ್ಯ ಅಶೋಕ್ , ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಯಶೋಧರ ಬಂಗೇರ,ಪ್ರದೀಶ್ ಮರೋಡಿ ಹಾಗೂ ಊರ ಪರವೂರ ದಾನಿಗಳ ಸಹಕಾರದಲ್ಲಿ ನೂತನ ಬಸ್ ನೀಡಲಾಗಿದೆ.

LEAVE A REPLY

Please enter your comment!
Please enter your name here