ಬೆಳ್ತಂಗಡಿ ಗೃಹರಕ್ಷಕದಳ ಘಟಕಕ್ಕೆ ಪ್ರಭಾರ ಘಟಕಾಧಿಕಾರಿಯಾಗಿ ಡೇನಿಸ್ ಡಿಸೋಜ ನೇಮಕ

0

ಬೆಳ್ತಂಗಡಿ: ಬೆಳ್ತಂಗಡಿ ಘಟಕದಲ್ಲಿ ಜೇಷ್ಠತೆ ಆಧಾರದ ಮೇರೆಗೆ ಹಿರಿಯರಾಗಿರುವ ಡೇನಿಸ್ ಡಿ’ಸೋಜರವರನ್ನು ಗೃಹರಕ್ಷಕದಳದ ಘಟಕಕ್ಕೆ ನೂತನ ಪ್ರಭಾರ ಘಟಕಾಧಿಕಾರಿಯಾಗಿ ಜು.3 ರಂದು ನೇಮಿಸಲಾಗಿದೆ.ಡೇನಿಸ್ ಡಿಸೋಜಾ ಅವರು ಮಂಗಳೂರು ವಿಶ್ವವಿದ್ಯಾಲದಿಂದ ವಾಣಿಜ್ಯ ಪದವಿ ಪಡೆದಿದ್ದಾರೆ.

ಎನ್ ಸಿ ಸಿ B ಮತ್ತು C ಸರ್ಟಿಫಿಕೇಟ್ ಹೊಂದಿದ್ದಾರೆ. ಇಲಾಖೆಯಲ್ಲಿ 15 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಸೆಕ್ಷನ್ ಲೀಡರ್ ಶ್ರೇಣಿಯನ್ನು ಹೊಂದಿದ್ದಾರೆ.ಇಲಾಖೆ ನಡೆಸುವ ಗೃಹರಕ್ಷಕ ಅಧಿಕಾರಿಗಳ ತರಬೇತಿಯನ್ನು ಒಳಗೊಂಡಂತೆ ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ ಮತ್ತು ಲಘು ರಕ್ಷಣಾ ಇತ್ಯಾದಿ ಮೂರು ತರಬೇತಿಗಳನ್ನು ಪಡೆದಿದ್ದು ಈ ಮೂರು ತರಬೇತಿಗಳಲ್ಲಿ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.

ವಾರದ ಕವಾಯತಿನಲ್ಲಿ ಉತ್ತಮವಾದ ತರಬೇತಿಯನ್ನು ನೀಡುತ್ತಾರೆ.ಪ್ರತಿ ಸ್ವಾತಂತ್ರೋತ್ಸವ ಗಣರಾಜ್ಯೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ವಿಶೇಷ ಕವಾಯತುಗಳಲ್ಲಿ ಘಟಕವನ್ನು ಮುನ್ನಡೆಸುತ್ತಾರೆ.ಘಟಕದ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಯಕತ್ವ ವಹಿಸಿ ಘಟಕಾಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದಾರೆ.ಹೊಸ ಗೃಹರಕ್ಷಕರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಾರೆ.

ತರಬೇತಿಗೆ ತೆರಳುವ ಗೃಹರಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಅಳದಂಗಡಿಯವರು.

LEAVE A REPLY

Please enter your comment!
Please enter your name here