ಬೆಳ್ತಂಗಡಿ ಜಮೀಯತುಲ್ ಫಲಾಹ್ ಘಟಕದ ವಾರ್ಷಿಕ ಮಹಾಸಭೆ

0

ಬೆಳ್ತಂಗಡಿ ಇಲ್ಲಿಯ ಜಮೀಯತುಲ್ ಫಲಾಹ್ ಘಟಕದ ವಾರ್ಷಿಕ ಮಹಾಸಭೆ ಯು ಜುಲೈ ಏಳರಂದು ಘಟಕದ ಅಧ್ಯಕ್ಷರಾದ ಖಾಲಿದ್ ಪುಲಾಬೆಯವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಘಟಕದ ಕಛೇರಿಯಲ್ಲಿ ಜರಗಿತು.

ಜಿಲ್ಲಾ ಸಮಿತಿಯ ವತಿಯಿಂದ ನ್ಯಾಯವಾದಿ ಹಕೀಂ ಬಂಟ್ವಾಳ. ಅಶ್ರಫ್ ಮರೋಡಿ.ವೀಕ್ಷಕರಾಗಿ ಆಗಮಿಸಿ ಮಹಾಸಭೆ ನಡೆಸಿಕೊಟ್ಟರು.ಘಟಕದ ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಸೇರಿದಂತೆ ಘಟಕದ ಸದಸ್ಯರು ಉಪಸ್ಥಿತರಿದ್ದರು. ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ರವರು ಖಿರಾಅತ್ ಪಠಿಸಿದರು.

ಕಾರ್ಯದರ್ಶಿ ಉಮ್ಮರ್ ಬೆಳ್ತಂಗಡಿಯವರು ವಾರ್ಷಿಕ ವರದಿ ವಾಚಿಸಿದರು.ಕೋಶಾಧಿಕಾರಿ ಇಬ್ರಾಹಿಂ ಮುಸ್ಲಿಯಾರ್ ರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.

ಹಜ್ಜಿ ಯಾತ್ರೆ ಪೂರೈಸಿ ಬಂದ ಅಬ್ದುಲ್ ರಝೂಖ್ ಡಿ ಡಿ .ಉಮ್ಮರ್ ಮಾಸ್ಟರ್ ಮದ್ದಡ್ಕ, ಬದ್ರುದ್ದೀನ್ ಮಾಸ್ಟರ್ ಮದ್ದಡ್ಕ, ರವರನ್ನು ಅಭಿನಂದಿಸಲಾಯಿತು. ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ರವರು ಮಾತನಾಡಿ ಸಂಸ್ಥೆ ನಡೆದು ಕೊಂಡು ಬಂದ ದಾರಿಯನ್ನು ನೆನಪಿಸಿದರು. ವೀಕ್ಷಕರಾಗಿ ಬಂದ ನ್ಯಾಯವಾದಿ ಹಕೀಂ ಬಂಟ್ವಾಳ ರವರು ಮಾತನಾಡಿ ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು.ಇನ್ನೋರ್ವ ವೀಕ್ಷಕ ಅಶ್ರಫ್ ಮರೋಡಿಯವರು ಮಾತನಾಡಿ ಶುಭ ಹಾರೈಸಿದರು.

ಸಹ ಕಾರ್ಯದರ್ಶಿ ಆಲಿಯಬ್ಬ ಪುಲಾಬೆಯವರು ಸ್ವಾಗತಿಸಿದರು ಅಧ್ಯಕ್ಷೀಯ ಭಾಷಣ ಮಾಡಿದ ಖಾಲಿದ್ ಪುಲಾಬೆಯವರು ಮಾತನಾಡಿ ಘಟಕದ ಅಭಿವೃದ್ಧಿಗೆ ಸಹಕರಿಸಿದ ಘಟಕದ ಸದಸ್ಯರಿಗೂ ಅಜೀವ ಸದಸ್ಯರಿಗೂ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಸಹಕರಿಸಿದ ಪ್ರ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು. ಘಟಕದ ಕೋಶಾಧಿಕಾರಿ ಇಬ್ರಾಹಿಂ ರವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here