ಕಣಿಯೂರು ಚಂದ್ರಯ್ಯ ಆಚಾರ್ಯ ನಿಧನ

0

ಬೆಳ್ತಂಗಡಿ: ಯಕ್ಷಗಾನ ಅರ್ಥದಾರಿ, ಕಾಷ್ಟಶಿಲ್ಪಿ ಚಂದ್ರಯ್ಯ ಆಚಾರ್ಯ ಕಣಿಯೂರು ಅವರು ಜೂ.5 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಇವರು ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಆದೂರುಪೇರಾಲು ಇದರ ಸಕ್ರೀಯ ಸದಸ್ಯರಾಗಿದ್ದರು.

ಯಕ್ಷಗಾನ ಬಯಲಾಟಗಳಲ್ಲಿ ಬಹುತೇಕ ಸೌಮ್ಯ ಪಾತ್ರಗಳನ್ನೆ ನೆಚ್ಚಿಕೊಂಡಿದ್ದರೂ ಪುಂಡು ವೇಷಗಳನ್ನು ಕೂಡ ನಿರ್ವಹಿಸುತ್ತಿದ್ದರು.ದೇವೇಂದ್ರ, ಅರ್ಜುನ, ಜಯಂತ, ಸುದರ್ಶನ ಇತ್ಯಾದಿ ಪಾತ್ರ ಗಳು ಇವರ ಘನತೆಯನ್ನು ಹೆಚ್ಚಿಸಿದೆ. ಅತ್ಯಂತ ಸೊಗಸಾದ ಸ್ವರಭಾರದೊಂದಿಗೆ ಕಥೆಯನ್ನು ಮನಮುಟ್ಟುವಂತೆ ನಿರೂಪಿಸುತ್ತಿದ್ದರು. ಬಹಳ ಅಚ್ಚುಕಟ್ಟುತನದ ಅರ್ಥಗಾರಿಕೆ ಅವರದಾಗಿತ್ತು.ಕೊಟ್ಟ ಪಾತ್ರಕ್ಕೆ ತನ್ನದೆ ಆದ ಮೆರುಗು ತುಂಬಿಸುತ್ತಿದ್ದರು.

ಪಾಂಬೇಲು ಶ್ರೀರಾಮ ಭಟ್, ಸಾದೂರು ಮಧ್ವರಾಯ ಭಟ್, ಮಾರೂರು ಮಂಜುನಾಥ ಭಂಡಾರಿ, ಗಂಗಯ್ಯ ಮಾಸ್ತರ್, ಉಗ್ರೋಡಿ ಮಂಜಪ್ಪ ಗೌಡ ,ಆದೂರು ಪೇರಾಲು ಸಂಜೀವ ಗೌಡ, ಬರಮೇಲು ಹೊನ್ನಪ್ಪ ಗೌಡ, ಬೊಳೋಳಿ ದುಗ್ಗ ಗೌಡ, ಮುಂತಾದವರ ಸಮಕಾಲಿನ ಅರ್ಥದಾರಿಯಾಗಿ , ವೇಷಧಾರಿಯಾಗಿ ಯಕ್ಷಗಾನಕ್ಕೆ ವಿಶೇಷ ಕೊಡುಗೆ ನೀಡಿದವರು.

LEAVE A REPLY

Please enter your comment!
Please enter your name here