






ಪುದುವೆಟ್ಟು: ಜೂನ್ 28 ರಂದು (ಭಾನುವಾರ) ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಮೀಯಾರಿನ ಪ್ರಸಿದ್ಧ ಶ್ರೀ ವನದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ನಾಡಿಗೆ ವರುಣನ ಕೃಪೆಯಾಗಿ, ಉತ್ತಮ ಮಳೆ-ಬೆಳೆಯಾಗಲೆಂದು ಭಕ್ತಾದಿಗಳ ವಿಶೇಷ ಸಹಕಾರದೊಂದಿಗೆ ಶ್ರೀದೇವಿಗೆ ಸಿಯಾಳ (ಎಳನೀರು) ಅಭಿಷೇಕವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.


ಪ್ರಸ್ತುತ ದಿನಗಳಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಸುಸೂತ್ರವಾಗಿ ಸಾಗಲಿ ಮತ್ತು ನಾಡಿನಾದ್ಯಂತ ಸಮೃದ್ಧಿ ನೆಲೆಸಲಿ ಎಂಬ ಉದ್ದೇಶದಿಂದ ಈ ವಿಶೇಷ ಪೂಜಾ ಕೈಂಕರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಹಾಗೂ ಊರಿನ ಭಕ್ತಾದಿಗಳು ಒಟ್ಟಾಗಿ ಸೇರಿ ಶ್ರೀದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬೊಮ್ಮಣ್ಣ ಗೌಡ ಮಠ, ಗೌರವ ಅಧ್ಯಕ್ಷ ರಮೇಶ್ ಪ್ರಭು ಉಜಿರೆ, ಕಾರ್ಯದರ್ಶಿ ಸಂತೋಷ್ ಕೆ.ಸಿ., ಉಪಾಧ್ಯಕ್ಷ ಜನಾರ್ಧನ ಪೂಜಾರಿ ಹಾಗೂ ಕೋಶಾಧಿಕಾರಿ ಸಾಜು ಕೆ.ಆರ್. ಉಪಸ್ಥಿತರಿದ್ದರು.ಅಲ್ಲದೆ, ಸಮಿತಿಯ ಸದಸ್ಯರಾದ ಸೋಮನಾಥ ಗೌಡ, ವರಮಹಾಲಕ್ಷ್ಮಿ ಪೂಜೆ ಸಮಿತಿಯ ಅಧ್ಯಕ್ಷ ಮೋಹಿನಿ ಧರ್ಮರಾಜ್, ಸದಸ್ಯರಾದ ಶ್ರೀಮತಿ ಅನಿತಾ ಸೇರಿದಂತೆ ಮೀಯಾರು ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತಾದಿಗಳು ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.









