






ವೇಣೂರು: ಯುವವಾಹಿನಿ ವಿನೂತನ ಯೋಜನೆ “ಬೆಳಕು” ಕಾರ್ಯಕ್ರಮ ಜೂ.26ರಂದು ಪೇರಿ – ಹೊಸಂಗಡಿ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ನಡೆಯಿತು. ಪ್ರಾರ್ಥನೆಯೊಂದಿಗೆ ಆರಂಭಗೊಂಡು ತದನಂತರ ಸದಸ್ಯತ್ವ ಮತ್ತು ಆಸರೆ ಯೋಜನೆಯ ಬಗ್ಗೆ ಚರ್ಚಿಸಿ ಬಡ ಕುಟುಂಬದ ವಿದ್ಯಾರ್ಥಿಗೆ ಸಹಾಯಧನ ಕೊಡುವುದುದೆಂದು ನಿರ್ಧರಿಸಲಾಯಿತು.


ಘಟಕದ ಕೋಶಾಧಿಕಾರಿಯಾದ ಸತೀಶ್ ಚಿಗುರು ಇವರ ಪ್ರಾಯೋಜಕತ್ವದಲ್ಲಿ ಕೊಡಮಾಡಲ್ಪಟ್ಟ ಬೇಬಿ ಪೇರಿ -ಹೊಸಂಗಡಿ ಇವರ ಮನೆಗೆ ಉಚಿತ ವಿದ್ಯುತ್ ಸಂಪರ್ಕಕ್ಕೆ ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ, ಕಾರ್ಯದರ್ಶಿ ದಕ್ಷಾ ಅಂಬಲಾ ಅಂಡಿಂಜೆ, ಮಾಜಿ ಅಧ್ಯಕ್ಷರುಗಳಾದ ನಿತೀಶ್ ಹೆಚ್, ನವೀನ್ ಪಚ್ಚೇರಿ, ಅರುಣ್ ಕೋಟ್ಯಾನ್, ಶುಭಕರ ಪೂಜಾರಿ ಸಾವ್ಯ, ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ,ಘಟಕದ ಸಲಹೆಗಾರ ರಾಕೇಶ್ ಮೂಡುಕೋಡಿ, ಪೇರಿ -ಹೊಸಂಗಡಿ ಶ್ರೀ ಶಾರದಾಂಭ ಭಜನ ಮಂದಿರದ ಅಧ್ಯಕ್ಷ ಆನಂದ್ ಬಂಗೇರ, ಕಾರ್ಯದರ್ಶಿ ಸುಜಿತ್ ಕುಮಾರ್ , ಸದಸ್ಯರಾದ ರಶ್ಮಿ ಹರಿಪ್ರಸಾದ್, ಘಟಕದ ಪ್ರವೀಣ್ ಕೋಟ್ಯಾನ್ ನಾರಾವಿ, ಮಹಿಳಾ ನಿರ್ದೇಶಕರುಗಳಾದ ಗುಣವತಿ ಡಿ, ಜಯಂತಿ, ಸಂಗಮ್ ಪೇರಿ, ಸೂರಜ್ ಪೇರಿ, ಅಂಕಿತ್ ಬಂಗೇರ ಕೊಡಿಂಗೇರಿ, ಬಾಬು ಕೋಟ್ಯಾನ್, ಸನತ್, ಸಂದೀಪ್, ಸಂದೇಶ್ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಚಾಲನೆಯನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಕೋಶಾಧಿಕಾರಿ ಸತೀಶ್ ಚಿಗುರು ಅವರನ್ನು ಪೇರಿ -ಹೊಸಂಗಡಿ ಶ್ರೀ ಶಾರದಾಂಭ ಭಜನ ಮಂದಿರದ ಪರವಾಗಿ ಸನ್ಮಾನಿಸಲಾಯಿತು. ಘಟಕದ ವ್ಯಕ್ತಿತ್ವ ವಿಕಾಸನ ನಿರ್ದೇಶಕ ಸುಜಿತ್ ಕುಮಾರ್ ಸ್ವಾಗತಿಸಿ, ಘಟಕದ ಕಾರ್ಯದರ್ಶಿ ದಕ್ಷಾ ಅಂಬಲರವರು ಧನ್ಯವಾದ ಅರ್ಪಿಸಿದರು.









