ಸ್ನೇಹಕಿರಣ ಜಿಲ್ಲಾ ಮಹಿಳಾ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ; ಒಕ್ಕೂಟ ಬಲವರ್ಧನೆ ತರಬೇತಿ

0

ಬೆಳ್ತಂಗಡಿ: ಇಲ್ಲಿನ ಸ್ನೇಹಕಿರಣ ಮಹಿಳಾ ಜಿಲ್ಲಾ ಒಕ್ಕೂಟದ ನೇತೃತ್ವದಲ್ಲಿ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಒಕ್ಕೂಟ ಬಲವರ್ಧನೆ ತರಬೇತಿ ಕಾರ್ಯಕ್ರಮವನ್ನು ಜೂನ್ 25 ರಂದು ಇಲ್ಲಿನ ಸಾಂತೋಮ್ ಟವರ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಒಕ್ಕೂಟದ ಹಾಲಿ ಅಧ್ಯಕ್ಷರಾದ ಎಲಿಯಮ್ಮ ತೋಮಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿ ಸಿಸಿಲ್ಯಾ ತಾವ್ರೊ ಮಾತನಾಡಿ, “ಒಕ್ಕೂಟದ ಸದಸ್ಯರುಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು, ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಲು ಪ್ರಮುಖ ಪಾತ್ರ ವಹಿಸಬೇಕು” ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಡಿ.ಕೆ.ಆರ್.ಡಿ.ಎಸ್ (DKRDS) ಸಂಸ್ಥೆಯ ನಿರ್ದೇಶಕರಾದ ಫಾದರ್ ಆದರ್ಶ್ ಪಿ.ಎಸ್ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸಮಿತಿ ಸದಸ್ಯರ ಜವಾಬ್ದಾರಿಗಳು, ಕರ್ತವ್ಯಗಳು ಮತ್ತು ಸಂಘದ ನಿಯಮಾವಳಿಗಳ ಕುರಿತು ಸುದೀರ್ಘ ಮಾಹಿತಿ ನೀಡಿ ತರಬೇತಿ ನೀಡಿದರು.ನೂತನ ಪದಾಧಿಕಾರಿಗಳ ಆಯ್ಕೆ (2026-2029):ಮಹಾಸಭೆಯಲ್ಲಿ ಮುಂದಿನ 3 ವರ್ಷಗಳ ಅವಧಿಗೆ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

ಅಧ್ಯಕ್ಷರು: ಉಷಾ ಜೋಯ್ಉಪಾಧ್ಯಕ್ಷರು: ಫಿಲೋಮಿನ ಸಿಜೆಕಾರ್ಯದರ್ಶಿ: ವೈಶಾಲಿಜೊತೆ ಕಾರ್ಯದರ್ಶಿ: ಚಂದನಕೋಶಾಧಿಕಾರಿ: ಮಂಜುಳ ಜಾನ್ಸಮಿತಿ ಸದಸ್ಯರು: ಮಿನಿ ತೋಮಸ್, ಉಷಾ, ಡೈಸಿ, ಶ್ರೀಮತಿ ಪ್ರಿನ್ಸಿಕಾರ್ಯಕ್ರಮದ ಆರಂಭದಲ್ಲಿ ಪ್ರಿನ್ಸಿ ಅವರು ಸ್ವಾಗತಿಸಿದರು ಮತ್ತು ಕೊನೆಯಲ್ಲಿ ಜಿನ್ಸಿ ರಾಜೇಶ್ ಅವರು ಧನ್ಯವಾದ ಸಮರ್ಪಿಸಿದರು. ಮಹಾಸಭೆಯಲ್ಲಿ ಸ್ನೇಹಕಿರಣ ಒಕ್ಕೂಟದ 18 ಪ್ರಮುಖ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here