ಧರ್ಮಸ್ಥಳದಲ್ಲಿ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಠಿ: ಅಡ್ಡ ಮತದಾನ ಆರೋಪಗಳಿಗೆ ತಿರುಗೇಟು

0

ಧರ್ಮಸ್ಥಳ, ಜೂ. 26:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗುರುವಾರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಜೂ.26 ಬೆಳಗ್ಗೆ ದರ್ಶನ ಪಡೆದ ಬಳಿಕ ಸುದ್ದಿಗೋಷ್ಠಿ ನಡೆಸಿದರು.

ಮಂಜುನಾಥನಿಗೆ ಪ್ರಾರ್ಥನೆ”ಮೂರ್ನಾಲ್ಕು ದಿನ ದೆಹಲಿಯಲ್ಲಿ ಪಕ್ಷದ ಹಿರಿಯರನ್ನು ಭೇಟಿಯಾಗಿದ್ದೆ. ನಿನ್ನೆ ರಾತ್ರಿ ನೇರ ಮಂಗಳೂರಿಗೆ ಬಂದು ಧರ್ಮಸ್ಥಳಕ್ಕೆ ಬಂದೆ. ರಾಜ್ಯದಲ್ಲಿ ಬರಗಾಲ ದೂರವಾಗಲಿ, ರೈತನ ಬೆಳೆಗೆ ಒಳ್ಳೆಯ ಬೆಲೆ ಸಿಗಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸಿದ್ದೇನೆ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, ಹಿಂದೂಗಳ ರಕ್ಷಣೆ ಮಾಡುವ ಸರ್ಕಾರ ಬರಬೇಕು” ಎಂದರು..ಅಡ್ಡ ಮತದಾನ ವಿವಾದಕ್ಕೆ ಸ್ಪಷ್ಟನೆ”ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ನನಗೆ ನೋವು ತಂದಿದೆ. ನಾನು ಮತ್ತು ಡಿ.ಕೆ. ಶಿವಕುಮಾರ್ ನಡುವೆ ವ್ಯವಹಾರಿಕ ಸಂಬಂಧ ಇದೆ ಎಂದು ಅಪಪ್ರಚಾರ ಮಾಡಿದರು. ನಾನೇ ಅಡ್ಡ ಮತದಾನಕ್ಕೆ ಸಹಕಾರ ನೀಡಿದ್ದೇನೆ ಎಂದು ನಮ್ಮವರೇ ಚರ್ಚೆ ಮಾಡಿದರು.

ಮೋದಿ, ಅಮಿತ್ ಷಾ ಆಶೀರ್ವಾದದಿಂದ ರಾಜ್ಯಾಧ್ಯಕ್ಷ ಆಗಿದ್ದೇನೆ. ಇಂತಹ ಕೀಳು ಮಟ್ಟದ ಯೋಚನೆ ಮಾಡುವುದಿಲ್ಲ. ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಆತ್ಮೀಯತೆ ಇಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.. ಈಶ್ವರಪ್ಪಗೆ ತಿರುಗೇಟು”2018ರಲ್ಲಿ 17 ಶಾಸಕರು ಯಡಿಯೂರಪ್ಪ ನಾಯಕತ್ವಕ್ಕೆ ಬಂದರು. ಆಗ ಒಳ್ಳೆಯ ಸರ್ಕಾರ ಕೊಟ್ಟೆವು. ಸಿದ್ದರಾಮಯ್ಯ ಸರ್ಕಾರದಲ್ಲಿ 18 ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಈಶ್ವರಪ್ಪ ಆಗ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಎಂಜಾಯ್ ಮಾಡಿದರು. ಆದರೆ ಅವರಿಗೆ ಎಲ್ಲವೂ ಮರೆತುಹೋಗಿದೆ” ಎಂದು ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

63 ಶಾಸಕರಿಗೆ ಸಂದೇಶ”ಬಿಜೆಪಿಯ 63 ಶಾಸಕರಿಗೆ ಹೇಳುತ್ತೇನೆ – ಕಾಂಗ್ರೆಸ್ ಬೇರೆ ಬೇರೆ ಹೆಸರನ್ನು ತೇಲಿ ಬಿಡುತ್ತಿದೆ. ಇದರಿಂದ ಕಾರ್ಯಕರ್ತರು ಅನುಮಾನದಿಂದ ನೋಡುವಂತಾಗಿದೆ. ಸತ್ಯ ಹೊರಗೆ ಬರುತ್ತದೆ. ಅಡ್ಡ ಮತದಾನದ ಚರ್ಚೆಗೆ ಇವತ್ತಿಗೆ ಇತಿಶ್ರೀ ಹಾಡುತ್ತೇವೆ” ಎಂದರು.ಬಿಡದಿ ಟೌನ್‌ಶಿಪ್‌ಗೆ ವಿರೋಧ”ರೈತರನ್ನು ಒಕ್ಕಲೆಬ್ಬಿಸಲು ನಾವು ಬಿಡುವುದಿಲ್ಲ. ಬಿಡದಿ ಟೌನ್‌ಶಿಪ್ ವಿರುದ್ಧ ಹೋರಾಟ ಆರಂಭಿಸುತ್ತೇವೆ. ನಾಳೆ ಬೆಂಗಳೂರಿನಲ್ಲಿ ಘೋಷಣೆ ಮಾಡುತ್ತೇನೆ” ಎಂದು ಹೇಳಿದರು.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ಕರಾವಳಿ ಭಾಗದ ಶಾಸಕರುಗಳಾದ ಹರೀಶ್ ಪೂಂಜ, ಯಶಪಾಲ್ ಸುವರ್ಣ, ರಾಜೇಶ್ ನಾಯ್ಕ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಲ್ಯ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಲಿ, ವಿಧಾನ ಪರಿಷ್ ಶಾಸಕರುಗಳಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾ‌ರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪೊ, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್ ಹಾಗೂ ಪ್ರಮುಖ ನಾಯಕರುಗಳಾದ ಜಯಂತ್ ಗೌಡ ಗುರಿಪಳ್ಳ, ದಿನೇಶ್‌ ಗೌಡ ದಿಡುಪೆ ಮೊದಲಾದವರು ಉಪಸ್ಥಿತರಿದ್ದರು. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು

LEAVE A REPLY

Please enter your comment!
Please enter your name here