







ಬೆಳ್ತಂಗಡಿ: ಪ್ರಕೃತಿ ಪ್ರೇಮಿಗಳು ಹಾಗೂ ಚಾರಣಿಗರ ನೆಚ್ಚಿನ ತಾಣವಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಗಡಾಯಿಕಲ್ಲು ನಾಳೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.
ಆದರೆ, ಅರಣ್ಯ ಇಲಾಖೆಯು ಚಾರಣಿಗರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರವಾಸ ಕೈಗೊಳ್ಳುವ ಮುನ್ನ ಈ ಕೆಳಗಿನ ಪ್ರಮುಖ ಅಂಶಗಳನ್ನು ಗಮನಿಸುವುದು ಕಡ್ಡಾಯವಾಗಿದೆ.
ಆನ್ಲೈನ್ ನೋಂದಣಿ ಕಡ್ಡಾಯ: ಗಡಾಯಿಕಲ್ಲು ಚಾರಣಕ್ಕೆ ಹೋಗಬಯಸುವವರು ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಆದ kudremukhanationalpark.in ನಲ್ಲಿ ಮುಂಚಿತವಾಗಿ ಪ್ರೀ-ರಿಜಿಸ್ಟ್ರೇಷನ್ (Pre-registration) ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ದಿನಕ್ಕೆ 500 ಜನರಿಗೆ ಮಾತ್ರ ಅವಕಾಶ: ಪರಿಸರದ ಮೇಲಿನ ಒತ್ತಡ ನಿಯಂತ್ರಿಸಲು ಒಂದು ದಿನಕ್ಕೆ ಕೇವಲ 500 ಪ್ರವಾಸಿಗರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.


ಪ್ರವೇಶದ ಸಮಯ: ಬೆಳಗ್ಗೆ 7:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಮಾತ್ರ ಗಡಾಯಿಕಲ್ಲು ಏರಲು ಅವಕಾಶವಿರುತ್ತದೆ.ಒಂದು ವೇಳೆ ಮಧ್ಯಾಹ್ನ 1:00 ಗಂಟೆಯ ಒಳಗಾಗಿಯೇ 500 ಜನರ ಕೋಟಾ ಪೂರ್ಣಗೊಂಡರೆ, ತಕ್ಷಣವೇ ಪ್ರವೇಶ ದ್ವಾರವನ್ನು ಮುಚ್ಚಲಾಗುತ್ತದೆ.
ಆಫ್ಲೈನ್ ಪಾವತಿ (Offline Payment Only): ಆನ್ಲೈನ್ನಲ್ಲಿ ಕೇವಲ ನೋಂದಣಿ ಮಾತ್ರ ಮಾಡಿಕೊಳ್ಳಬೇಕಾಗಿದ್ದು, ಪ್ರವೇಶ ಶುಲ್ಕದ ಹಣವನ್ನು ಸ್ಥಳದಲ್ಲೇ ನಗದು ರೂಪದಲ್ಲಿ (Offline) ಪಾವತಿಸಬೇಕಿರುತ್ತದೆ.
ಗುರುತಿನ ಚೀಟಿ ಕಡ್ಡಾಯ: ಚಾರಣದ ಆರಂಭಿಕ ತಪಾಸಣಾ ಕೇಂದ್ರದಲ್ಲಿ ಪ್ರತಿಯೊಬ್ಬರೂ ತಮ್ಮ ಅಧಿಕೃತ identity card (ಆಧಾರ್ ಕಾರ್ಡ್, ವೋಟರ್ ಐಡಿ ಇತ್ಯಾದಿ) ಅನ್ನು ತೋರಿಸುವುದು ಕಡ್ಡಾಯವಾಗಿದೆ ಎಂದು ಅರಣ್ಯ ಇಲಾಖೆ ವನ್ಯ ಜೀವಿ ವಿಭಾಗ ವಲಯ ಅರಣ್ಯಧಿಕಾರಿ ಶರ್ಮಿಷ್ಠ ತಿಳಿಸಿದ್ದಾರೆ.









