ಬೆಳ್ತಂಗಡಿ: ನಿಯಂತ್ರಣ ತಪ್ಪಿ ಫುಟ್‌ಪಾತ್‌ಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್

0

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿಯ ಫುಟ್‌ಪಾತ್ ಮೇಲೇರಿ, ಕಬ್ಬಿಣದ ತಡೆಗೋಡೆ ಹಾಗೂ ಬೀದಿ ದೀಪದ ಕಂಬಗಳಿಗೆ ಡಿಕ್ಕಿ ಹೊಡೆದ ಭೀಕರ ಘಟನೆ ಹಳೇ ಪೇಟೆಯ ವಾಣಿ ಶಾಲೆ ಬಳಿ ಜೂ.22 ರಂದು ಮಧ್ಯಾಹ್ನ ಸಂಭವಿಸಿದೆ.

ಗುರುವಾಯನಕೆರೆ ಕಡೆಯಿಂದ ಅತಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್, ವಾಣಿ ಶಾಲೆ ಸಮೀಪದ ಹೆದ್ದಾರಿಗೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ರಭಸದಿಂದ ನುಗ್ಗಿದ ಬಸ್ ರಸ್ತೆ ಬದಿಯ ಫುಟ್‌ಪಾತ್‌ಗೆ ಅಪ್ಪಳಿಸಿದೆ. ಡಿಕ್ಕಿಯ ತೀವ್ರತೆಗೆ ಅಲ್ಲಿದ್ದ ಕಬ್ಬಿಣದ ಸುರಕ್ಷತಾ ತಡೆಗೋಡೆಗಳು (ಗಾರ್ಡ್‌ಗಳು) ಮತ್ತು ಬೀದಿ ದೀಪದ ಕಂಬಗಳು ಪುಡಿಪುಡಿಯಾಗಿವೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here