







ಬಾಜಾರು: ಶ್ರೀ ರಾಮ್ ಫ್ರೆಂಡ್ಸ್ ಬಾಜಾರು ಸಂಘದ ಸದಸ್ಯರಾದ ತೆಕ್ಕಾರು ಗ್ರಾಮದ ಮರಮಗುತ್ತು ಹೊಸಮನೆ ನಿವಾಸಿ ಗುರುಕಿರಣ್ ಅವರು ಭಾರತೀಯ ಸೇನೆಯ ಅಗ್ನಿವೀರ್ (ಜಿಡಿ) ಹುದ್ದೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಶ್ರೀ ರಾಮ್ ಫ್ರೆಂಡ್ಸ್ ಬಾಜಾರು ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಗುರುಕಿರಣ್ ಅವರ ಸಾಧನೆಯನ್ನು ಶ್ಲಾಘಿಸಿ, ದೇಶಸೇವೆಯ ಮಹತ್ತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಶುಭ ಹಾರೈಸಿದರು. ಸಂಘದ ಸದಸ್ಯರು ಗುರುಕಿರಣ್ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದು, ಗುರುಕಿರಣ್ ಅವರ ಮುಂದಿನ ಸೇವಾ ಜೀವನಕ್ಕೆ ಶುಭಾಶಯಗಳನ್ನು ಕೋರಿದರು.









