ಸೂರ್ಯ ಶ್ರೀ ಸದಾಶಿವ ರುದ್ರ ಭಜನಾ ಮಂಡಳಿಗೆ ಶಾಲು ಹಸ್ತಾಂತರ

0

ಸೂರ್ಯ ಶ್ರೀ ಸದಾಶಿವ ರುದ್ರ ನೃತ್ಯ ಭಜನಾ ಮಂಡಳಿಯ ಸದಸ್ಯರಿಗೆ ಭಜನಾ ಸೇವೆಯನ್ನು ಮಾಡಲು ಒಂದು ಜೊತೆ ಶಾಲನ್ನು ಸುರ್ಯ ದರ್ಕಾಸು ಮನೆಯ ಸೋಮ ಇವರು ಉಡುಗೊರೆಯಾಗಿ ನೀಡಿದ್ದಾರೆ.

ಸೂರ್ಯ ಸದಾಶಿವೇಶ್ವರ ದೇವಸ್ಥಾನದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಆ ಕ್ಷೇತ್ರದ ಹೆಸರಿನಲ್ಲಿ ನಡೆಯುತ್ತಿರುವಂತಹ ಭಜನಾ ಮಂಡಳಿಯ ತರಬೇತಿಯನ್ನು ಗಮನಿಸಿ ನನ್ನಿಂದ ಏನಾದರೂ ದೇವರ ಸೇವೆ ಮಾಡಬೇಕೆನ್ನುವ ಹಂಬಲದಿಂದ ತಾನು ಕೂಡಿಟ್ಟ ಅಲ್ಪಸ್ವಲ್ಪ ಹಣದ ಪಾಲನ್ನು ಮಕ್ಕಳಿಗೆ ಸೇವೆಯ ರೂಪದಲ್ಲಿ ನೀಡಿದ್ದಾರೆ.

ಇನ್ನು ಮುಂದಕ್ಕೂ ಭಜನಾ ಮಂಡಲಿಗೆ ನನ್ನಿಂದ ಯಾವುದಾದರೂ ಸಹಾಯ ಹಸ್ತ ಬೇಕಾಗಿದ್ದಲ್ಲಿ ಖಂಡಿತವಾಗಿ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಸಮಯದಲ್ಲಿ ಭಜನಾ ಮಂಡಳಿಯ ಭಜನಾ ತರಬೇತಿಯ ಗುರುಗಳಾದ ನಾಗೇಶ್ ಬಿ ನೆರಿಯ ಸಂಚಾಲಕರಾದ ಉಷಾ ಮತ್ತು ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಉಷಾ ಸ್ವಾಗತಿಸಿವಂದಿಸಿದರು.

LEAVE A REPLY

Please enter your comment!
Please enter your name here