ಅಕ್ಷಯನಗರ: ಗೆಳೆಯರ ಬಳಗದ ನೂತನ ಸಭಾಂಗಣ ನಿರ್ಮಾಣಕ್ಕೆ ಶಿಲಾನ್ಯಾಸ

0

ಕಲ್ಮಂಜ: ಪ್ರಸಿದ್ಧ ಸಾಮಾಜಿಕ ಸಂಸ್ಥೆ ‘ಗೆಳೆಯರ ಬಳಗ ಅಕ್ಷಯನಗರ (ರಿ.) ನಿಡಿಗಲ್ ಕಲ್ಮಂಜ’ ಇದರ ನೂತನ ಸಭಾಂಗಣ ನಿರ್ಮಾಣದ ಭವ್ಯ ಶಿಲಾನ್ಯಾಸ ಕಾರ್ಯಕ್ರಮವು ಜೂನ್ 18ರಂದು ಯಶಸ್ವಿಯಾಗಿ ನೆರವೇರಿತು.

ಬಳಗದ ಹೆಮ್ಮೆಯ ಮಾರ್ಗದರ್ಶಕರು ಹಾಗೂ ನಿಡಿಗಲ್ ಶ್ರೀ ಶಾಂತಿನಾಥ ಸ್ವಾಮಿ ಜೈನ ಬಸದಿಯ ಆಡಳಿತ ಮುಕ್ತೇಸರರಾದ ಶ್ರೀ ರತನ್ ಕುಮಾರ್ ಜೈನ್ ಹುಣಿಪ್ಪಾಜೆ ಗುತ್ತು ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸಾಂಪ್ರದಾಯಿಕ ವಿಧಿ-ವಿಧಾನಗಳೊಂದಿಗೆ ನೂತನ ಸಭಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ಸಂಸ್ಥೆಯ ಪ್ರಮುಖ ಸಲಹೆಗಾರರಾದ ಧರ್ಣಪ್ಪ ಲಿಂಗಾಯತ, ಮೋನಪ್ಪ ಟಿ., ಸುಂದರ ಲಿಂಗಾಯತ, ಕೊರಗಪ್ಪ ಅಕ್ಷಯನಗರ, ಶ್ರೀಧರ ಅಕ್ಷಯನಗರ, ಭರತ್ ಅಕ್ಷಯನಗರ ಹಾಗೂ ಕರುಣಾಕರ ಪೂಜಾರಿ ಅಂಬಡೆದಡಿ ಉಪಸ್ಥಿತರಿದ್ದು ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಬಳಗದ ಮಾಜಿ ಅಧ್ಯಕ್ಷರುಗಳಾದ ಉಮೇಶ್ ಪೂಜಾರಿ ಅಂಬಡೆದಡಿ, ಸಂತೋಷ್ ಪೂಜಾರಿ ಕೆರೆಕೋಡಿ, ನಿರಂಜನ್ ಪೂಜಾರಿ ಕಡಂಬು ಮತ್ತು ಭಾಸ್ಕರ ಟೈಲರ್ ಅಕ್ಷಯನಗರ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಥ್ ನೀಡಿದರು

ಪ್ರಸ್ತುತ ಗೆಳೆಯರ ಬಳಗದ ಅಧ್ಯಕ್ಷರಾದ ಸುಬ್ರಾಯ ಅಕ್ಷಯನಗರ, ಕಾರ್ಯದರ್ಶಿ ಅಶೋಕ್ ಪೂಜಾರಿ ಬಳ್ಳಿದಡ್ಡ ಹಾಗೂ ಪ್ರಮುಖ ಮುಖಂಡರುಗಳಾದ ಮೋನಪ್ಪ ಅಕ್ಷಯನಗರ, ಅಶೋಕ್ ಶೆಟ್ಟಿ ಅಕ್ಷಯನಗರ ಸೇರಿದಂತೆ ಬಾಲ ಗೋಕುಲದ ಜಯಂತಿ ವಿಶ್ವನಾಥ, ಪುಷ್ಪಲತ ಭರತ್ ಹಾಗೂ ಬಳಗದ ಪದಾಧಿಕಾರಿಗಳು, ಸ್ಥಳೀಯ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ನೂತನ ಸಭಾಂಗಣವು ಶೀಘ್ರದಲ್ಲೇ ಲೋಕಾರ್ಪಣೆಗೊಂಡು ಊರಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಮುನ್ನುಡಿ ಬರೆಯಲಿದೆ ಎಂದು ಈ ಸಂದರ್ಭದಲ್ಲಿ ಆಶಿಸಲಾಯಿತು.

LEAVE A REPLY

Please enter your comment!
Please enter your name here