ಬೆಳ್ತಂಗಡಿ: ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ ಕೊಡುಗೆ; 11 ಕೋಟಿ ರೂ. ಅನುದಾನ ಬಿಡುಗಡೆ

0

ಬೆಳ್ತಂಗಡಿ: ತಾಲೂಕಿನ ರಸ್ತೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಬೃಹತ್ ಕೊಡುಗೆಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ ಕೇಂದ್ರೀಯ ರಸ್ತೆ ನಿಧಿಯಡಿ (Central Road Fund) ಬೆಳ್ತಂಗಡಿ ತಾಲೂಕಿನ ಎರಡು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು 11 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಲಾಗಿದೆ.ವೇಣೂರು-ಅಂಡಿಂಜೆ-ನಾರಾವಿ ರಸ್ತೆ: ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ವೇಣೂರು-ಅಂಡಿಂಜೆ-ನಾರಾವಿ ಜಿಲ್ಲಾ ಮುಖ್ಯ ರಸ್ತೆಯ ಸಮಗ್ರ ಅಭಿವೃದ್ಧಿಗಾಗಿ 6.00 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.ಸೋಮಂತಡ್ಕ-ಹೇಡ್ಯಾ ಹೆದ್ದಾರಿ: ಸೋಮಂತಡ್ಕದಿಂದ ಹೇಡ್ಯಾವರೆಗಿನ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗಾಗಿ 5.00 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ.

LEAVE A REPLY

Please enter your comment!
Please enter your name here