ಪೆರ್ಮುಡ ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮ: ಪರಿಸರ ಸಂರಕ್ಷಣೆ ಜೀವನದ ಭಾಗವಾಗಲಿ – ರತ್ನಾಕರ ಬಿ

0

ವೇಣೂರು: “ಶಾಲಾ ಹಂತದಲ್ಲೇ ಮಕ್ಕಳಿಗೆ ಸಸಿಗಳನ್ನು ನೆಡುವ ಮತ್ತು ಅವುಗಳನ್ನು ಪೋಷಿಸುವ ಅಭ್ಯಾಸವನ್ನು ಬೆಳೆಸಿದರೆ, ಪರಿಸರ ಸಂರಕ್ಷಣೆಯ ಮಹತ್ವವನ್ನು ಅವರು ಜೀವನಪರ್ಯಂತ ಅಳವಡಿಸಿಕೊಳ್ಳುತ್ತಾರೆ” ಎಂದು ವೇಣೂರು ಸಿ.ಎ. ಬ್ಯಾಂಕಿನ ಉಪಾಧ್ಯಕ್ಷರಾದ ರತ್ನಾಕರ ಬಿ. ಅವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಗುರುವಾಯನಕೆರೆ, ಮಹಾಲಿಂಗೇಶ್ವರ್ ಶೌರ್ಯ ವಿಪತ್ತು ಘಟಕ, ಗರ್ಡಡಿ ವಲಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ಮುಡ ಇವುಗಳ ಜಂಟಿ ಸಹಕಾರದೊಂದಿಗೆ ಶಾಲೆಯ ಹೊರಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಅರಣ್ಯ ನಾಶ ಹಾಗೂ ಹವಾಮಾನ ವೈಪರಿತ್ಯಗಳು ತೀವ್ರವಾಗಿ ಹೆಚ್ಚಾಗುತ್ತಿವೆ. ಇಂತಹ ಆತಂಕಕಾರಿ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕನೂ ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.ಶಾಲಾ ಆವರಣ ಸ್ವಚ್ಛತೆ ಹಾಗೂ ಗಿಡ ನಾಟಿ:ಕಾರ್ಯಕ್ರಮದ ಅಂಗವಾಗಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಗೂ ಸ್ವಯಂಸೇವಕರು ಊರಿನ ಸಾರ್ವಜನಿಕರೊಂದಿಗೆ ಕೈಜೋಡಿಸಿ ಶಾಲಾ ಹೊರಾಂಗಣವನ್ನು ಸ್ವಚ್ಛಗೊಳಿಸಿದರು. ತದನಂತರ ಶಾಲಾ ಆವರಣದಲ್ಲಿ ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳ ಯೋಜನೆಯ ಗರ್ಡಡಿ ವಲಯ ಮೇಲ್ವಿಚಾರಕಿ ಯಶೋಧ, ಕೃಷಿ ಮೇಲ್ವಿಚಾರಕ ಕೃಷ್ಣ, ವಲಯ ಒಕ್ಕೂಟದ ಅಧ್ಯಕ್ಷ ವರದರಾಜ ಕುಲಾಲ್, ನೀಟ್ಟಡೆ/ಪೆರ್ಮುಡ ಒಕ್ಕೂಟದ ಅಧ್ಯಕ್ಷ ಕರುಣಾಕರ ಹಾಗೂ ಪ್ರಕಾಶ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಮುಖ್ಯ ಶಿಕ್ಷಕಿ ಶ್ರೀಮತಿ ಅರುಣಾ, ಅರಣ್ಯ ಇಲಾಖೆ ಅಧಿಕಾರಿ ವಸಂತ, ಸೇವಾಪ್ರತಿನಿಧಿಗಳಾದ ವನಿತಾ ಮತ್ತು ಪಿ. ಜಯಂತಿ, ಪ್ರಮೀಳಾ ಉಪಸ್ಥಿತರಿದ್ದರು.ಅಲ್ಲದೆ, ಶೌರ್ಯ ವಿಪತ್ತು ಘಟಕದ ಸಮಸ್ತ ಸ್ವಯಂಸೇವಕರು, ಶಾಲಾ ಸಹಶಿಕ್ಷಕರು, ಒಕ್ಕೂಟದ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here