ವಿದ್ಯಾಮಾತಾ ಅಕಾಡೆಮಿಯಿಂದ ಪೊಲೀಸ್ ಹುದ್ದೆಗೆ ವಸತಿಯುತ ತರಬೇತಿ

0

ಪುತ್ತೂರು : ಕಳೆದ ಹಲವು ವರ್ಷಗಳ ಅವಧಿಯಲ್ಲಿ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ಪ್ರಾರಂಭವಾಗಿರುವ 2026ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ನೇಮಕಾತಿಯ ಆಯ್ಕೆ ಪ್ರಕ್ರಿಯೆಗಳಿಗೆ ಪೂರಕವಾಗಿ ನೇರ ತರಗತಿ ಮತ್ತು ಆನ್ಲೈನ್ ತರಗತಿಗಳ ಮೂಲಕ ತರಬೇತಿಯನ್ನು ನೀಡಲು ಮತ್ತೊಮ್ಮೆ ನುರಿತ ತಂಡದ ಮೂಲಕ ಸಜ್ಜಾಗಿದ್ದು ,ಜೂ.16 ರಿಂದ ತರಬೇತಿಗಳು ಪ್ರಾರಂಭವಾಗಲಿದೆಯೆಂದು ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕಾಡೆಮಿಯಿಂದ ಕರ್ನಾಟಕ ಪೊಲೀಸ್, ಭಾರತೀಯ ರಕ್ಷಣಾ ಪಡೆಗಳು ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿಗಳಲ್ಲಿ ತರಬೇತಿ ಪಡೆದ 100ಕ್ಕೂ ಮಿಕ್ಕಿದ ಅಭ್ಯರ್ಥಿಗಳು ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಈ ಯಶಸ್ಸುಗಳನೆಲ್ಲಾ ಮುಂದಿಟ್ಟುಕೊಂಡು ನಡೆಯುತ್ತಿರುವ ಈ ಅಹೋರಾತ್ರಿ ತರಬೇತಿಯ ಸದುಪಯೋಗವನ್ನು ಪಡೆದುಕೊಂಡು , ಪೊಲೀಸ್ ಹುದ್ದೆಯನ್ನು ಪಡೆದುಕೊಳ್ಳಲು ಸುವರ್ಣಾವಕಾಶವನ್ನು ಯುವ ಜನತೆಗೆ ಅಕಾಡೆಮಿ ವತಿಯಿಂದ ಅವಕಾಶ ಕಲ್ಪಿಸಲಾಗಿದೆ.*ಈ ರೀತಿ ನಡೆಯಲಿದೆ ವಿದ್ಯಾಮಾತಾದ ತರಬೇತಿ* ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ , ಉದ್ಯೋಗ ಮಾಡುತ್ತಿರುವವರಿಗೂ ತರಬೇತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು , ವಸತಿ ಸೌಲಭ್ಯದೊಂದಿಗೆ 24×7 ಮಾದರಿಯ ತರಬೇತಿಯನ್ನು ನೀಡಲಿದೆ ವಿದ್ಯಾಮಾತಾ. ನೇರ ತರಗತಿ ಮತ್ತು ಆನ್ಲೈನ್ ತರಗತಿಯ ಮೂಲಕ ನಡೆಯಲಿರುವ ತರಬೇತಿಯ ಜೊತೆಗೆ ಅಧ್ಯಯನ ಸಾಮಾಗ್ರಿ(Study Meterials) ಕೂಡ ಸಿಗಲಿದೆ.

24×7 ಲೈಬ್ರರಿ ವ್ಯವಸ್ಥೆ ಕೂಡ ಲಭ್ಯವಿದ್ದು ,ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆಗಳು ಇರುತ್ತವೆ. ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅಥವಾ ಖಾಸಗಿ ಉದ್ಯೋಗಿಗಳು ಸಂಜೆ ಬಂದು ವಸತಿ ಸೌಲಭ್ಯವನ್ನು ಉಪಯೋಗಿಸಿಕೊಂಡು ರಾತ್ರಿ ತರಬೇತಿಯನ್ನು ಪಡೆದುಕೊಂಡು ಹೋಗಲು ಅವಕಾಶವಿರುತ್ತದೆ.*ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ*1. ಪಿ ಯು ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು .2.ವಯಸ್ಸಿನ ಮಿತಿಯು ಕನಿಷ್ಠ: 18 ವರ್ಷ ಗರಿಷ್ಠ: 33 ವರ್ಷಗಳು.ಸಾಮಾನ್ಯ ಅಭ್ಯರ್ಥಿಗಳಿಗೆ 35ವರ್ಷ(OBC, SC, ST)3.ದೈಹಿಕ ಸಾಮರ್ಥ್ಯವು 168cm ಎತ್ತರ(ಪುರುಷ ಅಭ್ಯರ್ಥಿ), 157cm ಎತ್ತರ(ಮಹಿಳಾ ಅಭ್ಯರ್ಥಿ)*ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು* ಫೋಟೋ,ಅಂಕಪಟ್ಟಿಗಳು,ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅತ್ಯಗತ್ಯವಾಗಿದ್ದು , ಅರ್ಜಿ ಸಲ್ಲಿಸಲು ಜುಲೈ 03. ಕೊನೆಯ ದಿನ.ವಿದ್ಯಾಮಾತಾ ಅಕಾಡೆಮಿಯಲ್ಲಿ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ತರಬೇತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ ಇಲ್ಲವೇ ದೂರವಾಣಿ ಸಂಖ್ಯೆ 9620468869 / 9148935808 /99451 82516 / 9448527606 ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here