







ಬೆಳ್ತಂಗಡಿ: ಸತ್ಯ ಶೋಧಕ ವೇದಿಕೆ ಇದರ ಆಶ್ರಯದಲ್ಲಿ ಜೂ.7 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಬುದ್ಧ, ಬಸವ, ಪುಲೆ, ನಾಲ್ವಡಿ ಕ್ರಷ್ಣರಾಜ ಒಡೆಯರ್ ಹಾಗೂ ಡಾ! ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪ್ರಯುಕ್ತ 5 ನೇ ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಕಳೆದ ಸಾಲಿನ ಹತ್ತನೇ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮ ಉದ್ಘಾಟಿಸಿ ಸತ್ಯ ಶೋಧಕದ 2 ನೇ ವರ್ಷದ ಈ ಕಾರ್ಯಕ್ರಮ ಶ್ಲಾಘನೀಯ.. ಮುಂದಕ್ಕೂ ಇದನ್ನು ಮುಂದುವರಿಸಿ ನನ್ನ ಸಹಕಾರ ಇದ್ದೇ ಇದೆ ಎಂದು ತಿಳಿಸಿದರು.


ಅಧ್ಯಕ್ಷ ಸುಕೇಶ್ ಕೆ ಮಾಲಾಡಿ ತಂಡದ ಕಾರ್ಯಯೋಜನೆಗಳ, ಉದ್ದೇಶಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೋ.ಜೋಸೆಫ್ ಎನ್.ಎಮ್, ಶ್ರೀ ಕ್ಷೇತ್ರ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ ಪೆರಾಲ್ದಪಲ್ಕೆ ಬಂಗಾಡಿ ಇದರ ಉಪಾಧ್ಯಕ್ಷರಾದ ಲಕ್ಷ್ಮಣ್ ಜಿ.ಎಸ್, ಪಟ್ಟಣ ಪಂಚಾಯತ್ ಸಿಬ್ಬಂದಿ ಶ್ರೀಮತಿ ವನಿತಾ ರಮೇಶ್, ಮಹಮ್ಮಾಯಿ ಕಟ್ಟೆ ಪ್ರೆಂಡ್ಸ್ ಪಣಕಜೆ ಇದರ ಅಧ್ಯಕ್ಷರಾದ ಮೋಹನ್, ಮಾಜಿ ಅಧ್ಯಕ್ಷ ರಾಜೇಶ್ ಕುಲಾಲ್ ಶುಭಹಾರೈಸಿದರು.
ಸುಮಾರು 186 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.. 85% ಕ್ಕಿಂತ ಹೆಚ್ಚು ಅಂಕಗಳಿಸಿದ 16 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕು.ಲಲಿತ ಕಳೆಂಜ ನಿರೂಪಿಸಿ, ಕು. ಸುಶ್ಮೀತಾ ಮಾಲಾಡಿ ಸ್ವಾಗತಿಸಿ,ಕು. ರಮ್ಯ ಕಳೆಂಜ ವಂದಿಸಿದರು.









