ಉಜಿರೆ: ಭಾರಿ ಮಳೆಗೆ ಅಂಬಡೆಬೆಟ್ಟು ತಾತ್ಕಾಲಿಕ ರಸ್ತೆ ಸಂಪೂರ್ಣ ಕುಸಿತ; ಸಂಚಾರ ಸಂಪೂರ್ಣ ಬಂದ್!

0

ಉಜಿರೆ: ಉಜಿರೆ ಮತ್ತು ಇಂದಬೆಟ್ಟು ಗ್ರಾಮಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಅಂಬಡೆಬೆಟ್ಟು ಸೇತುವೆಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆಯು ಜೂನ್ 9ರಂದು ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರ ಕಾಲ್ನಡಿಗೆಗೂ ತೀವ್ರ ಕಷ್ಟಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪರ್ಯಾಯ ಮಾರ್ಗದ ವಿವರ:ಅಂಬಡೆಬೆಟ್ಟು ರಸ್ತೆ ಸಂಪೂರ್ಣ ಬಂದ್ ಆಗಿರುವುದರಿಂದ ಸಾರ್ವಜನಿಕರು ಮತ್ತು ವಾಹನ ಚಾಲಕರು ಇಂದಬೆಟ್ಟು ಕಡೆಗೆ ಸಂಚರಿಸಲು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.ಉಜಿರೆಯಿಂದ ಹೋಗುವವರು ಉಜಿರೆ – ಸುರ್ಯ ರಸ್ತೆ ಮೂಲಕ ಸಂಚರಿಸಬಹುದು.

ಬೆಳ್ತಂಗಡಿ ಅಥವಾ ಲಾಯಿಲ ಕಡೆಯಿಂದ ಬರುವವರು ಲಾಯಿಲ – ಇಂದಬೆಟ್ಟು ಮಾರ್ಗವನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ.ಹೊಸ ಸೇತುವೆ ಕಾಮಗಾರಿ:ಕಳೆದ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಅಂಬಡೆಬೆಟ್ಟು ಸೇತುವೆಯ ನೂತನ ನಿರ್ಮಾಣ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ತಾತ್ಕಾಲಿಕ ರಸ್ತೆಯೊಂದನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ ಪ್ರಸ್ತುತ ಸುರಿದ ಭಾರಿ ಮಳೆಯ ಆರ್ಭಟಕ್ಕೆ ಈ ತಾತ್ಕಾಲಿಕ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

LEAVE A REPLY

Please enter your comment!
Please enter your name here