






ಉಜಿರೆ: ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ನೂತನ ಕಟ್ಟಡ ಉತ್ಥಾನ ಇದರ ಉದ್ಘಾಟನಾ ಸಮಾರಂಭ ಜೂ.6 ರಂದು ನಡೆಯಿತು. ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಿದರು.
ಶಾಸಕ ಹರೀಶ್ ಪೂಂಜ ಸಭಾ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡಿದರು.ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣಪಡುವೆಟ್ನಾಯ ಸಭಾ ಭವನವನ್ನು ಉದ್ಘಾಟಿಸಿದರು. ದ.ಕ. ಜಿ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಸಹಕಾರಿ ಧ್ವಜಾರೋಹಣ ನೆರವೇರಿಸಿದರು.


ಉಜಿರೆ ಸಹಕಾರ ಸಂಘದ ಅಧ್ಯಕ್ಷ ಕೇರಿಮಾರು ಬಾಲಕೃಷ್ಣ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಸಹಕಾರಿ ಯೂನಿಯನ್ ಅಧ್ಯಕ್ಷ ಸಹಕಾರ ರತ್ನ ಸತೀಶ್ ಕಾಶಿಪಟ್ಣ ಪಡಿತರ ವಿಭಾಗವನ್ನು ಉದ್ಘಾಟಿಸಿದರು., ಲಿಫ್ಟ್ ನ್ನು ಪುತ್ತೂರು ಉಪ ವಿಭಾಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ. ನೇರವೇರಿಸಿದರು.

ಮೀಟಿಂಗ್ ಹಾಲ್ ನ್ನು ಬೆಳಾಲು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ ಬೆಳಾಲು ಉದ್ಘಾಟನೆ ಮಾಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಜಿರೆ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀಧರ ಪೂಜಾರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸರಸ್ವತಿ ರೈ,ಸಂಘದ ನಿರ್ದೇಶಕರುಗಳಾದ ಅರುಣ್ ಕುಮಾರ್, ರಜತ್ ಗೌಡ, ಪುಷ್ಪಾವತಿ ಆರ್. ಶೆಟ್ಟಿ, ವಾರಿಜ ಎಸ್. ಗೌಡ, ಗುರುರಾಜ್, ಅರವಿಂದ ಕಾರಂತ್, ಅನಿಲ್ ಪ್ರಕಾಶ್ ಡಿ ಸೋಜಾ, ಅಣ್ಣು ನಾಯ್ಕ, ಸಾಧು ಎಂ. ಸುದರ್ಶನ್, ಸಿಬ್ಬಂದಿ ವರ್ಗದವರು, ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.ಶ್ರೀದೇವಿ ಸಚಿನ್ ಪ್ರಾರ್ಥನೆ ಗೈದರು. ಸಿಬ್ಬಂದಿ ಮೋಹನ ಗೌಡ ಸ್ವಾಗತಿಸಿ, ವಿಜಯ ಅತ್ತಾಜೆ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ನವೋದಯ ಸ್ವಸಹಾಯ ಸಂಘದ ಸದಸ್ಯರು, ಸಂಘದ ಸದಸ್ಯರು ಭಾಗವಹಿಸಿದ್ದರು.ಸಂಜೆ ಸಾಂಸ್ಕೃಕ ಕಾರ್ಯಕ್ರಮದ ಅಂಗವಾಗಿ ಹಿಪ್ ಬಾಯ್ಸ್ ಡ್ಯಾನ್ಸ್ ಕ್ರೀವ್ ಇವರಿಂದ ಗಾನ ವೈಭವ, ರಾತ್ರಿ ಶಿರಡಿ ಸಾಯಿಬಾಬಾ ಮಂದಿರ ಅಶ್ರಿತ ಸಾಯಿಶಕ್ತಿ ಕಲಾ ಬಳಗಉರ್ವ ಚಿಲಿಂಬಿ ಮಂಗಳೂರು ಇವರಿಂದ ಜೋಡು ಜೀಟಿಗೆ ತುಳು ನಾಟಕ ಪ್ರದರ್ಶನ ನಡೆಯಲಿದೆ.









