






ಸುರ್ಯ: ಶ್ರೀ ಸದಾಶಿವ ರುದ್ರ ಭಜನಾ ಮಂಡಳಿಯ ಉದ್ಘಾಟನಾ ಸಂದರ್ಭದಲ್ಲಿ ದಾನಿಗಳು ನೀಡಿದ್ದ ಭರವಸೆಯಂತೆ, ಮಂಡಳಿಯ ಸರ್ವ ಸದಸ್ಯರ ಭಜನಾ ಸೇವೆಗಾಗಿ ಮುನಿರಾಜ್ ಅಜ್ರಿ ಅವರು ತಾಳಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸುರ್ಯ ಕ್ಷೇತ್ರದಲ್ಲಿ ನಿರಂತರವಾಗಿ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಮುನಿರಾಜ್ ಅವರು, ಭಜನಾ ಮಂಡಳಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕೊಡುಗೆಯನ್ನು ಹಸ್ತಾಂತರಿಸಿದರು.


ಭಜನಾ ಮಂಡಳಿಯನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿ, ತಮ್ಮ ಕೈಲಾದ ಸೇವೆಯನ್ನು ಸಮಾಜಕ್ಕೆ ಅರ್ಪಿಸುವುದಾಗಿ ಮಂಡಳಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ದೃಢಸಂಕಲ್ಪ ಮಾಡಿದರು.
ಭಜನಾ ತರಬೇತಿ ಗುರುಗಳಾದ ನಾಗೇಶ್ ಬಿ. ನೆರಿಯ, ಅಭಿಷೇಕ್ ಚಾರ್ಮಾಡಿ ಹಾಗೂ ಮಂಜುನಾಥ್ , ಮಂಡಳಿಯ ಸಂಚಾಲಕ ಸುನಿತಾ ಮತ್ತು ಉಷಾ ಭಜನಾ ಮಂಡಳಿಯ ಸದಸ್ಯರ ಪೋಷಕರು ಉಪಸ್ಥಿತರಿದ್ದರು









