ಎಸ್‌ಪಿಬಿ ಗಾಯನೋತ್ಸವದಲ್ಲಿ ಮಿತ್ತಬಾಗಿಲಿನ ವಿಜಯಲಕ್ಷ್ಮಿ ಶೆಟ್ಟಿ ಅವರಿಂದ ಗಾಯನ

0

ಬೆಳ್ತಂಗಡಿ: ಎಸ್ ಪಿ ಬಿ ಫಾನ್ಸ್ ಅಸೋಸಿಯೇಷನ್ ರಿ. ಮಂಗಳೂರು ಉಡುಪಿ ಇದರ ವತಿಯಿಂದ ಗಾನ ಗಂಧರ್ವ ಸಂಗೀತ ಲೋಕದ ಮಾಂತ್ರಿಕ ಎಸ್.ಪಿ ಬಾಲ ಸುಬ್ರಹ್ಮಣ್ಯಂ ಅವರ 80 ನೇ ಜನ್ಮ ದಿನೋತ್ಸವದ ಅಂಗವಾಗಿ ಮಂಗಳೂರು ಕುದ್ಮುಲ್ ರಂಗರಾವ್ ಸಭಾಭವನದಲ್ಲಿ ನಡೆದ ಏಕದಿನ ಸಂಗೀತೋತ್ಸವದಲ್ಲಿ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿ ನಿವಾಸಿ ವಿಜಯಲಕ್ಷ್ಮಿ ಎನ್ ಶೆಟ್ಟಿ ಅವರು ಭಾಗವಹಿಸಿ ವಿಶೇಷ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬೆಳಗ್ಗಿನಿಂದ ಸಂಜೆಯವರೆಗೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಗಾನಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ, ಉತ್ತಮ ಗಾಯಕರಾಗಿ ಮೂಡಿಬರುತ್ತಿರುವ ವಿಜಯಲಕ್ಷ್ಮಿಎನ್ ಶೆಟ್ಟಿ ಯವರು ಸುಮಧುರ ಗಾಯನ ನಡೆಸಿಕೊಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here