






ಅಳದಂಗಡಿ: ನಮ ಮಾತೆರ್ಲ ಒಂಜೇ ಕಲಾತಂಡದಿಂದ ಅನಾರೋಗ್ಯದಿಂದ ಬಳಲುತ್ತಿರುವ ತೆಂಕಕಾರಂದೂರಿನ ಹಿತೇಶ್ ಬೇಕಲ್ ಅವರಿಗೆ ಅಳದಂಗಡಿ ಸತ್ಯದೇವತೆಯ ಸನ್ನಿಧಾನದಲ್ಲಿ ರೂ. 10,500 ಮೊತ್ತದ ಆರ್ಥಿಕ ಸಹಕಾರ ನೀಡಲಾಯಿತು.


ತಂಡದ ಗೌರವಾಧ್ಯಕ್ಷ ಅಳದಂಗಡಿಯ ಡಾಕ್ಟರ್ ಎನ್.ಎಂ. ತುಳುಪುಳೆ, ದರ್ಶನ್ ಶೆಟ್ಟಿ ಅಳದಂಗಡಿ, ಕಿರಣ್ ಕುಮಾರ್ ಜ್ಯೋತಿಕಾ ಸ್ಟುಡಿಯೋ ಅಳದಂಗಡಿ, ಜನಾರ್ಧನ್ ಕೊಡಂಗೆ ಅಳದಂಗಡಿ, ಗಿರೀಶ್ ಕುಲಾಲ್ ನಾವರ, ರವಿ ಪೂಜಾರಿ ಕದಿರಾಜ ಸುಲ್ಕೇರಿಮೊಗ್ರು, ಬಾಲಕೃಷ್ಣ ಮೂಲ್ಯ ಸುಲ್ಕೇರಿ, ರಮೇಶ್ ಸುವರ್ಣ ಅಳದಂಗಡಿ ಉಪಸ್ಥಿತರಿದ್ದರು.









