ಕ್ಯಾಂಪ್ಕೋ ‘ಚಿತ್ತ ಸದಸ್ಯರ ಆರೋಗ್ಯ ದತ್ತ’ ಯೋಜನೆ: ಫಲಾನುಭವಿಗೆ ₹50,000 ವೈದ್ಯಕೀಯ ಧನಸಹಾಯ ಹಸ್ತಾಂತರ

0

ವೇಣೂರು: ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯ ದತ್ತ ಎಂಬ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ವೇಣೂರು ಶಾಖೆಯ ಸದಸ್ಯರಾದ, ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಸಿದ್ದು ಮಡಿವಾಳ ಇವರ ಆಂಜಿಯೋಪ್ಲಾಸ್ಟಿ ವೈದ್ಯಕೀಯ ವೆಚ್ಚದ ಪರಿಹಾರವಾಗಿ ಮಂಜೂರಾದ ₹50,000/- ಮೊತ್ತದ ಚೆಕ್‌ನ್ನು ಅವರ ಸ್ವಗ್ರಹ ದಲ್ಲಿ ಜೂ.4ರಂದು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ದಯಾನಂದ ಹೆಗ್ಡೆ ಫಲಾನುಭವಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬೈಕಂಪಾಡಿ ಪ್ರಾಂತ್ಯದ ಪ್ರಾದೇಶಿಕ ವ್ಯವಸ್ಥಾಪಕ ನಿತಿನ್ ಕೊಟ್ಯಾನ್ ಹಾಗೂ ವೇಣೂರು ಶಾಖೆಯ ವ್ಯವಸ್ಥಾಪಕ ಅನಿಶ್ ರಾಜ್ ಯಂ ಹಾಗೂ ಬೈಕಂಪಾಡಿ ಶಾಖೆಯ ಅಶೋಕ್ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here