







ನಿಟ್ಟಡೆ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ಕಾಲದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಾಡೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಫಂಡಿಜೆವಾಳ್ಯ ಹೊಸದೊಂದು ಕ್ರಾಂತಿಗೆ ಮುನ್ನುಡಿ ಬರೆದಿದೆ.
ಶಾಲೆಯ ಹಳೆ ವಿದ್ಯಾರ್ಥಿ ಸಂಘ ಒದಗಿಸುತ್ತಿರುವ ಉಚಿತ ವಾಹನ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣದ ಪರಿಣಾಮವಾಗಿ ಈ ವರ್ಷ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಹೆಚ್ಚಾಗಿದೆ.


ಜೂ 01 ರಂದು ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಅತ್ಯಂತ ಸಡಗರದಿಂದ ನಡೆದಿದ್ದು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅಧ್ಯಕ್ಷೆ ಸ್ವಾತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪೋಷಕರಲ್ಲಿ ಹೆಚ್ಚಿದ ಸರ್ಕಾರಿ ಶಾಲೆಯ ವಿಶ್ವಾಸಶಾಲೆಯ ಹಳೆ ವಿದ್ಯಾರ್ಥಿ ಸಂಘ, SDMC ಮತ್ತು ಶಿಕ್ಷಕರ ಜಂಟಿ ಶ್ರಮದಿಂದಾಗಿ ವಿದ್ಯಾರ್ಥಿಗಳಿಗೆ ಇಲ್ಲಿ ಉತ್ತಮ ಶಿಕ್ಷಣ, ಶಿಸ್ತುಬದ್ಧ ವಾತಾವರಣ ಮತ್ತು ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಒದಗಿಸಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಶಾಲೆಯಲ್ಲಿ ‘ಸ್ಪೋಕನ್ ಇಂಗ್ಲಿಷ್’ (Spoken English) ತರಗತಿಗಳನ್ನು ನಡೆಸುತ್ತಿರುವುದು ಪೋಷಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಅಪಾರ ವಿಶ್ವಾಸ ಮೂಡಿಸಿದೆ.ವಿಶೇಷವಾಗಿ ಶಾಲೆಯಿಂದ ದೂರವಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ವಾಹನ (ಬಸ್) ಸೌಲಭ್ಯ ಕಲ್ಪಿಸಿರುವುದರಿಂದ ಮಕ್ಕಳು ಯಾವುದೇ ತೊಂದರೆಯಿಲ್ಲದೆ ಶಾಲೆಗೆ ಆಗಮಿಸುತ್ತಿದ್ದಾರೆ. ಈ ಆಕರ್ಷಕ ಸೌಲಭ್ಯಗಳಿಂದಾಗಿ ಪ್ರಭಾವಿತರಾದ ಅನೇಕ ಪೋಷಕರು ತಮ್ಮ ಮಕ್ಕಳನ್ನು ದುಬಾರಿ ಖಾಸಗಿ ಶಾಲೆಗಳಿಂದ ಬಿಡಿಸಿ, ಈ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ.
ಕೇವಲ ಎರಡು ವರ್ಷಗಳ ಹಿಂದೆ ಕೇವಲ 9 ಮಕ್ಕಳಿದ್ದ ಈ ಶಾಲೆಯಲ್ಲಿ, ಶಿಕ್ಷಕರು ಮತ್ತು ಪೋಷಕರ ಸತತ ಪ್ರಯತ್ನದಿಂದಾಗಿ 2025-26ನೇ ಸಾಲಿನಲ್ಲಿ ಮಕ್ಕಳ ಸಂಖ್ಯೆ 22ಕ್ಕೆ ಏರಿಕೆಯಾಗಿತ್ತು. ಇದರಲ್ಲಿ 5 ವಿದ್ಯಾರ್ಥಿಗಳು ಎಂಟನೇ ತರಗತಿಯ ಉನ್ನತ ಶಿಕ್ಷಣಕ್ಕೆ ತೆರಳಿದ್ದಾರೆ.ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾತಿ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ಒಟ್ಟು 12 ಹೊಸ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಮೂಲಕ ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 29ಕ್ಕೆ ಏರಿದೆ.
ತರಗತಿವಾರು ವಿದ್ಯಾರ್ಥಿಗಳ ವಿವರ:1 ನೇ ತರಗತಿ: 7 ವಿದ್ಯಾರ್ಥಿಗಳು (ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಈ ತರಗತಿಯಲ್ಲಿ ಗರಿಷ್ಠ ದಾಖಲಾತಿ!)2 ನೇ ತರಗತಿ: 4 ವಿದ್ಯಾರ್ಥಿಗಳು3 ನೇ ತರಗತಿ: 3 ವಿದ್ಯಾರ್ಥಿಗಳು4 ನೇ ತರಗತಿ: 2 ವಿದ್ಯಾರ್ಥಿಗಳು5 ನೇ ತರಗತಿ: 6 ವಿದ್ಯಾರ್ಥಿಗಳು6 ನೇ ತರಗತಿ: 2 ವಿದ್ಯಾರ್ಥಿಗಳು7 ನೇ ತರಗತಿ: 5 ವಿದ್ಯಾರ್ಥಿಗಳುಮುಂದುವರಿದ ದಾನಿಗಳ ಸಹಾಯ ಹಸ್ತಉಜಿರೆಯ ಪ್ರಸಿದ್ಧ ಸಾಮಾಜಿಕ ಸಂಸ್ಥೆಯಾದ ‘ವಿಶಾಲ್ ಸೇವಾ ಟ್ರಸ್ಟ್’ ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಯ ಮಕ್ಕಳಿಗೆ ಉಚಿತ ನೋಟು ಪುಸ್ತಕಗಳನ್ನು ಒದಗಿಸಿಕೊಟ್ಟಿದೆ. ಇದರೊಂದಿಗೆ ಈ ಬಾರಿ ಶಾಲೆಗೆ ಹೊಸದಾಗಿ ಸುಂದರವಾದ ಪೇಂಟಿಂಗ್ (ಬಣ್ಣ ಬಳಿಯಲು) ಮಾಡಲು ಸಂಪೂರ್ಣ ಸಹಾಯ ಹಸ್ತ ನೀಡುವುದಾಗಿ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ವಲೇರಿಯನ್ ಡಿಸೋಜ ಅವರು ಭರವಸೆ ನೀಡಿದ್ದಾರೆ.









