ಜೂ.3 ಉಜಿರೆ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

0

ಬೆಳ್ತಂಗಡಿ: ಉಜಿರೆ ಉಪವಿಭಾಗ ವ್ಯಾಪ್ತಿಯಲ್ಲಿ ಜೂ.3 ರಂದು 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪ ಕೇಂದ್ರದಿಂದ ಕಕ್ಕಿಂಜೆ 33/11 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ 33ಕೆವಿ ಕಕ್ಕಿಂಜೆ ಹಾಗೂ 33ಕೆವಿ ಪಿಲಿಕ್ಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ವಿದ್ಯುತ್ ವ್ಯತ್ಯಯ ಆಗುವುದರಿಂದ 33ಕೆವಿ ಪೆಟ್ರೋವೆಲ್ ಸ್ಥಾವರ, 33ಕೆವಿ ಹೆಚ್.ಪಿ.ಸಿ.ಎಲ್ ಸ್ಥಾವರ, ತೊಟತ್ತಾಡಿ, ಚಿಬಿದ್ರೆ, ನೆರಿಯ, ಚಾರ್ಮಾಡಿ, ಕಡಿರುದ್ಯಾವರ, ಮಿತ್ತ ಬಾಗಿಲು, ಮಲವಂತಿಗೆ , ಮುಂಡಾಜೆ, ಕಲ್ಮಂಜ, ದಿಡಿಪೆ, ಕೊಲ್ಲಿ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಉಜಿರೆ ಮೆಸ್ಕಾಂ ಇಲಾಖೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here