ಗೇರುಕಟ್ಟೆ: ಕಳಿಯ ಸಹಕಾರ ಸಂಘದ ಮಾರಾಟ ಸಹಾಯಕ ಶಿವರಾಮ್ ನಾಯ್ಕ ನಿವೃತ್ತಿ; ಬೀಳ್ಕೊಡುಗೆ ಸಮಾರಂಭ

0

ಗೇರುಕಟ್ಟೆ: ಇಲ್ಲಿನ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಲವಾರು ವರ್ಷಗಳಿಂದ ಮಾರಾಟ ಸಹಾಯಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಮ್ ನಾಯ್ಕ ಅವರಿಗೆ ಮೇ 30ರಂದು ಸಂಘದ ಶಾಖೆಯಲ್ಲಿ ಬೀಳ್ಕೊಡುಗೆ ನೀಡಲಾಯಿತು.

ಸಂಘದ ಯಶಸ್ಸಿಗೆ ಶ್ರಮಿಸಿದ ಶಿವರಾಮ್ ನಾಯ್ಕ ಅವರ ಕರ್ತವ್ಯ ನಿಷ್ಠೆಯನ್ನು ಈ ಸಂದರ್ಭದಲ್ಲಿ ಗೌರವಿಸಿ, ಶುಭ ಹಾರೈಸಲಾಯಿತು.ಕಾರ್ಯಕ್ರಮದಲ್ಲಿ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಉಪಾಧ್ಯಕ್ಷ ರಾಜ್ ಪ್ರಕಾಶ್‌ ಶೆಟ್ಟಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕವಿತಾ ಶೆಟ್ಟಿ , ಸಂಘದ ನಿರ್ದೇಶಕ ಎಂ. ಹರಿದಾಸ ಪಡಂತ್ತಾಯ, ಶೇಖರ ನಾಯ್ಕ, ಚಂದ್ರಾವತಿ, ಮಮತ, ಗೋಪಾಲ ನಾಯ್ಕ ಬನ, ಕುಶಾಲಪ್ಪ ಗೌಡ, ಬಾಲಕೃಷ್ಣ ಗೌಡ ಬಿರ್ಮೊಟ್ಟು, ಉದಿತ್‌, ಲೋಕೇಶ್ ನಾಳ ಹಾಗೂ ಕೇಶವ ಪೂಜಾರಿ ಉಪಸ್ಥಿತರಿದ್ದು, ನಿವೃತ್ತ ನೌಕರರಿಗೆ ಗೌರವ ಸಲ್ಲಿಸಿದರು.

LEAVE A REPLY

Please enter your comment!
Please enter your name here