







ಮುಂಡೂರು :ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ, ಮುಂಡೂರು ಇದರ ವತಿಯಿಂದ ಮುಂಡೂರು ಗ್ರಾಮದ ಎಲ್ಲಾ ಧರ್ಮ ಮತ್ತು ಸಮುದಾಯದ ಮಕ್ಕಳಿಗೆ ಮೇ 24ರಂದು ಬೆಳಿಗ್ಗೆ ಶ್ರೀ ಶಾರದಾಂಬ ಯುವಕ ಮಂಡಲದ ಮೈದಾನದಲ್ಲಿ ಸ್ಫೂರ್ತಿ ಬದುಕಿನ ಹೊಸ ಚೈತನ್ಯ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸಂಘದ ಅಧ್ಯಕ್ಷ ವಸಂತ ಪೂಜಾರಿಅಧ್ಯಕ್ಷತೆ ವಹಿಸಲಿದ್ದಾರೆ. ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಬ್ಯಾಗ್ ಪುಸ್ತಕ ವಿತರಣೆ ಮಾಡಲಿದ್ದಾರೆ.


ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಜಯಂತ್ ಕೋಟ್ಯಾನ್,ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿ ಮೋಕ್ತೆಸರ ರಾಜೀವ್, ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ ಪ್ರಸಾದ್ ಅಧ್ಯಕ್ಷರು, ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ,, ಕಾರ್ಕಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಡಾ. ಚಂದ್ರಾವತಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂದ ಉಪಾಧ್ಯಕ್ಷ ಸುಂದರ ಪೂಜಾರಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳಿಗೆ, ಯುವಕ ಯುವತಿಯರಿಗೆ ಸ್ಪೂರ್ತಿ – ಬದುಕಿಗೆ ಹೊಸ ಚೈತನ್ಯ…ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಸ್ಥಿತೇಶ್ ಎಸ್. ಬಾರ್ಯ ಭಾಗವಹಿಸುವರು.ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಗುರುವಪ್ಪ ಸಾಲಿಯಾನ್, ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಅರವಿಂದ ಭಟ್ ಎಂ. ಮುಂಡೂರು ಅತ್ತುಸ್ ವೇಗಸ್, ಮುಂಡೂರು ಆಶಾ ಕಾರ್ಯಕರ್ತೆ ಸುಶೀಲ ಶೆಟ್ಟಿ, ಮುಂಡೂರು ಚಿದಾನಂದ ಆಚಾರ್ಯ, ಮುಂಡೂರು ಜುಮ್ಮಾ ಮಸೀದಿ ಅಧ್ಯಕ್ಷ ರಮ್ಲಾನ್ ಹಾಜಿ, ಅಶೋಕ್ ಕುಮಾರ್ ಜೈನ್ ಮುಂಡೂರು,ಮುಂಡೂರು ಸ. ಕಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ಕಲ್ಲೇಶ್ ಕೆ.ಬಿ., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಮೂಲ್ಯ, ಮುಂಡೂರು ಶಾರದಾಂಭ ಯುವಕ ಮಂಡಲದ ಅಧ್ಯಕ್ಷ ರಮಾನಂದ ಸಾಲಿಯಾನ್, ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹರೀಶ್ಚಂದ್ರ ಹೆಗ್ಡೆ, ಮುಂಡೂರು ಸಿವಿಲ್ ಗುತ್ತಿಗೆದಾರ ಜಯಾನಂದ ನ್ಯಾಕ ಸಿವಿಲ್ ಕಾಡಂಗೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಸತೀಶ್,ದೇಜಪ್ಪ ಪರನೀರು, ಸತೀಶ್ ಎಂ.ಕೆ. ಗಾಂದೊಟ್ಟ,ಅಂಗವಾಡಿ ಕಾರ್ಯಕರ್ತೆ ಚಂದ್ರಾವತಿ, ಯುವವಾಹಿನಿ ಬೆಳ್ತಂಗಡಿ ಘಟಕದ ನಿಯೋಜಿತ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಹಾಗೂ ಈ ಶೈಕ್ಷಣಿಕ ಕಾರ್ಯಗಾರದಲ್ಲಿ ಮುಂಡೂರು ಗ್ರಾಮದ ಎಲ್ಲಾ ಧರ್ಮ ಹಾಗೂ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಉಪಸ್ಥಿತರಿರುವರು ಎಂದು ಸಂಘದ ಅಧ್ಯಕ್ಷ ವಸಂತ ಪೂಜಾರಿ ತಿಳಿಸಿದ್ದಾರೆ.









