









ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮೇ 21 ರಂದು ಗುರುವಾಯನಕೆರೆ ಮತ್ತು ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ವಿದ್ಯುತ್ ನಿಲುಗಡೆಯಾಗುವ ಸಮಯ:ಗುರುವಾರ (21.05.2026) ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ.ಬಾಧಿತ ಪ್ರದೇಶಗಳು:ಗುರುವಾಯನಕೆರೆ, ಮೇಲಂತಬೆಟ್ಟು, ಹಳೆಕೋಟೆ, ಚರ್ಚ್ ರೋಡ್, ಹುಪ್ಪೆಕಟ್ಟೆ, ರೇಷ್ಮೆರೋಡ್, ಗೇರುಕಟ್ಟೆ, ನಾಳ, ಜಾರಿಗೆಬೈಲು, ಗೋವಿಂದೂರು, ಮಾವಿನಕಟ್ಟೆ, ಪರಪ್ಪು, ಪಣೆಜಾಲು, ಮಲ್ಲೊಟ್ಟು ಮತ್ತು ಎರುಕಡಪು ಪರಿಸರ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸಗಳಿಗೆ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ (MESCOM) ಪ್ರಕಟಣೆಯಲ್ಲಿ ಕೋರಿದೆ.









