ಉಬಾರ್ ಮಂಜ ಬೈದ್ಯರ ಹೋರಾಟ ಜನರಿಗೆ ತಲುಪಿಸಲು ಸಂಸ್ಮರಣಾ ಸಮಿತಿ ರಚನೆ – ಕ್ರಾಂತಿವೀರ ಮಂಜ ಬೈದ್ಯರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ

0

ಉಬಾರ್ ಮಂಜ ಬೈದ್ಯ ಎಂದು ಕರೆಸಿಕೊಳ್ಳುತ್ತಿದ್ದ ಉಪ್ಪಿನಂಗಡಿಯ ಮಂಜಯ್ಯ ಬೈದ್ಯ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಕರಾವಳಿಯ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರು.

ಕ್ರಾಂತಿಕಾರಿ ರೈತ ನಾಯಕರೂ, ಬ್ರಿಟಿಷ್ ಸರಕಾರದಲ್ಲಿ ಉದ್ಯೋಗಿಯೂ ಆಗಿದ್ದ ಮಂಜಯ್ಯ ಬೈದ್ಯರ ಕ್ರಾಂತಿಯ ಹೋರಾಟದ ವಿಚಾರಗಳನ್ನು ಜನರಿಗೆ ಇನ್ನಷ್ಟು ತಿಳಿಸುವ ಉದ್ದೇಶದಿಂದ ಅವರ ವಂಶಸ್ಥರನ್ನು ಒಳಗೊಂಡ ಕ್ರಾಂತಿಕಾರಿ ಮಂಜಯ್ಯ ಬೈದ್ಯ ಸಂಸ್ಮರಣ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಸಮುದಾಯದವರನ್ನು ಒಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಸಮಿತಿ ರಚಿಸಲಾಗುವುದು ಎಂದು ದ.ಕ ಜಿಲ್ಲಾ ಕ್ರಾಂತಿವೀರ ಮಂಜ ವೈದ್ಯ ಸಂಸ್ಕರಣಾ ಸಮಿತಿ ಅಧ್ಯಕ್ಷರಾದ ಸಂಪತ್ ಬಿ ಸುವರ್ಣ ಹೇಳಿದರು. ಸುವರ್ಣ ಆರ್ಕೆಡ್ ನಲ್ಲಿ ಮೇ. ,20 ರಂದು ಪತ್ರಿಕಾಗೋಷ್ಟಿ ನಡೆಸಿದ ಅವರು, ಮಂಜಯ್ಯ ಬೈದ್ಯ ಅವರ ಸ್ಮಾರಕ ಹಾಗೂ ಕಂಚಿನ ಪುತ್ಥಳಿಯನ್ನು ಉಪ್ಪಿನಂಗಡಿಯಲ್ಲಿ ನಿರ್ಮಾಣ ಮಾಡಬೇಕು, ಬೆಳ್ತಂಗಡಿ- ಉಪ್ಪಿನಂಗಡಿ ಮಧ್ಯ ಭಾಗ ಕಲ್ಲೇರಿಯಲ್ಲಿ ಮಂಜ ಬೈದ್ಯರ ಹೆಸರಿನ ವೃತ್ತ ನಿರ್ಮಾಣವಾಗಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟರು.

ಹಿರಿಯ ಮುತ್ಸದ್ಧಿ ಕ್ರಾಂತಿವೀರ ಮಂಜ ವೈದ್ಯ ಸಂಸ್ಕರಣಾ ಸಮಿತಿಯ ಗೌರವ ಸಲಹೆಗಾರರಾದ ಭುಜಬಲಿ ಧರ್ಮಸ್ಥಳ, ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು, ಸಮಿತಿ ಸಂಚಾಲಕರಾದ ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ಉದಯ್ ಬಂದಾರು, ಮಂಜಯ್ಯ ಬೈದ್ಯ ವಂಶಸ್ಥ ವೆಂಕಪ್ಪ ಪೂಜಾರಿ ಕುಕ್ಕಾಜೆ, ಜನಾರ್ಧನ ಪೂಜಾರಿ, ವಿಜಯ ಗೌಡ ವೇಣೂರು, ರಾಘವ ಕಲ್ಮಂಜ, ಉಪ್ಪಿನಂಗಡಿಯ ರಾಮಚಂದ್ರ ಪೂಜಾರಿ, ವಸಂತ ಕುಕ್ಕಾಜೆ, ನಿತ್ಯಾನಂದ ನಾವುರ, ಹರ್ಷ ಸಂಪಿಗೆತ್ತಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here