







ಎಸ್ ಎಸ್ ಎಲ್ ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ವಿದ್ಯಾರ್ಥಿಯಾದ ಸುಧನ್ವ ಎ ಆರ್ ಇವರು 616 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ, ಜಿತೇಶ್ ಎನ್ ಇವರು ಹೆಚ್ಚುವರಿಯಾಗಿ 4 ಅಂಕಗಳನ್ನು ಗಳಿಸಿದ್ದು, ಒಟ್ಟು 608 ಅಂಕಗಳನ್ನು ಗಳಿಸಿ ಶಾಲೆಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ರಿಯೋನಾ ಮೋನಿಸ್ ಇವರು ಹೆಚ್ಚುವರಿಯಾಗಿ 3 ಅಂಕಗಳನ್ನು ಗಳಿಸಿ, ಒಟ್ಟು 604 ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಹಾಗೂ ಮರ್ವಿನ್ ಡಿ ಸೋಜಾ ಹೆಚ್ಚುವರಿಯಾಗಿ 5 ಅಂಕಗಳನ್ನು ಗಳಿಸಿ, ಒಟ್ಟು 602 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. . ಶಾಲೆಯು ಸತತ 11ನೇ ಬಾರಿ ಶೇಕಡಾ 100 ಫಲಿತಾಂಶವನ್ನು ದಾಖಲಿಸಿ, ಅಮೋಘ ಸಾಧನೆಯನ್ನು ಮಾಡಿರುತ್ತದೆ.









