







ಧರ್ಮಸ್ಥಳ :ರಾತ್ರಿ ಮನೆಯ ಹೊರ ಭಾಗದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ. 06 ರಂದು ಧರ್ಮಸ್ಥಳದಲ್ಲಿ ನಡೆದಿದೆ.


ಧರ್ಮಸ್ಥಳ ಗ್ರಾಮದ ಜೋಡುಸ್ನಾನದ ಅಗುಳೆ ನಿವಾಸಿ ಐತಪ್ಪ ಪೂಜಾರಿ (68) ಎಂಬವರು ಮೇ.6 ರಂದು ರಾತ್ರಿ 11 ಗಂಟೆಯಿಂದ ಮೇ.7 ರ ಬೆಳಗ್ಗೆ 6 ಗಂಟೆ ಒಳಗಡೆ ಮನೆಯ ಹೊರಗೆ ಅಳವಡಿಸಿದ್ದ ರಾಡ್ ಗೆ ನೈಲಾನ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐತಪ್ಪ ಪೂಜಾರಿರವರ ಸೊಸೆ ಬೆಳಗ್ಗೆ 6 ಗಂಟೆಗೆ ಎದ್ದು ಮನೆಯ ಅಂಗಳಕ್ಕೆ ಬಂದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಮೇ.7 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.









