ಕೆ ಎಂ ಜೆ ಜಿಲ್ಲಾ ನಾಯಕರ ಬೆಳ್ತಂಗಡಿ ಝೋನ್ ಭೇಟಿ;ಹಜ್ಜ್ ಯಾತ್ರಿಗಳಿಗೆ ಬೀಳ್ಕೊಡುಗೆ

0

ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ (ಕೆ ಎಂ ಜೆ) ಝೋನ್ ಸಮಿತಿಗೆ ಜಿಲ್ಲಾ ನಾಯಕರ ಭೇಟಿ ಹಾಗೂ ಹಜ್ಜ್ ಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಮೇ 5 ರಂದು ಬೆಳ್ತಂಗಡಿ ಜಮೀಯತುಲ್ ಫಲಾಹ್ ಘಟಕದ ಕಚೇರಿಯಲ್ಲಿ ಕೆ ಎಂ ಜೆ ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಎಸ್ ಎಂ ಕೋಯ ತಂಙಳ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕೆ ಎಂ ಜೆ ಜಿಲ್ಲಾ ಅಧ್ಯಕ್ಷ ರಾದ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮಗೆ ಅಲ್ಲಾಹು ನೀಡಿದ ಆರೋಗ್ಯ ಆಯುಷ್ಯ ಇರುವ ತನಕ ಸುನ್ನತ್ ಜಮಾಅತಿಗಾಗಿ ದುಡಿಯೋಣ ಎಂದರು. ಜಿಲ್ಲಾ ಕಾರ್ಯದರ್ಶಿ ಯೂಸುಫ್ ಸಯೀದ್ ಬೆಳ್ತಂಗಡಿ ಝೋನ್ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ಅವಲೋಕನ ನಡೆಸಿದರು.

ಈ ಸಂದರ್ಭದಲ್ಲಿ ಹಜ್ಜ್ ಯಾತ್ರೆ ಕೈಗೊಳ್ಳಲಿರುವ ಹೈದರ್ ಮದನಿ ಉಜಿರೆ, ಇಬ್ರಾಹಿಂ ಉಜಿರೆ, ಮುಹಮ್ಮದ್ ಅತ್ತಾಜೆ, ಉಮ್ಮರ್ ಮಾಸ್ಟರ್ ಮದ್ದಡ್ಕ. ಬದ್ರುದ್ದೀನ್ ಮಾಸ್ಟರ್ ಮದ್ದಡ್ಕ, ದಾವೂದ್ ಸಬರಬೈಲ್ ರವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು. ಹಾಗೂ ಸಮಾಜ ಸೇವಕರಾದ ಕೆ ಎಂ ಜೆ ರಾಜ್ಯ ನಾಯಕ ಅಬ್ಬೋನು ಮದ್ದಡ್ಕ ಹಾಗೂ ಉಮ್ಮರ್ ಕುಂಞಿ ನಾಡ್ಜೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಬೆಳ್ತಂಗಡಿ ಝೋನ್ ಉಸ್ತುವಾರಿ ಕಾಸಿಂ ಪದ್ಮುಂಜ, ಜಿಲ್ಲಾ ಕೋಶಾಧಿಕಾರಿ ಕಾಸಿಂ ಹಾಜಿ ಮಿತ್ತೂರು, ಉಮ್ಮರ್ ಕುಂಞಿ ನಾಡ್ಜೆ, ಅಬ್ಬೋನು ಮದ್ದಡ್ಕ ಹೈದರ್ ಮದನಿ ಉಜಿರೆ, ಉಮ್ಮರ್ ಮಾಸ್ಟರ್ ಮಾತನಾಡಿ ಶುಭ ಹಾರೈಸಿದರು. ರಾಜ್ಯ ನಾಯಕರಾದ ಸ್ವಾದಿಖ್ ಮಲೆಬೆಟ್ಟು, ಝೋನ್ ಕೋಶಾಧಿಕಾರಿ ಮುಹಮ್ಮದ್ ರಫೀ ಉಪಸ್ಥಿತರಿದ್ದರು. ಖಾಲಿದ್ ಮುಸ್ಲಿಯಾರ್ ಸ್ವಾಗತಿಸಿದರು. ಬೆಳ್ತಂಗಡಿ ಝೋನ್ ಕಾರ್ಯದರ್ಶಿ ಇಬ್ರಾಹಿಂ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here