






ಉಜಿರೆ: ಉಜಿರೆಯ ಎಸ್ ಡಿ ಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ,ಪ್ರಖ್ಯಾತ ವ್ಯಂಗ್ಯಚಿತ್ರಕಾರ ಶೈಲೇಶ್ ಉಜಿರೆ ರಾಷ್ಟ್ರಮಟ್ಟದ ಕಾರ್ಟೂನ್ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದಿದ್ದಾರೆ.


ವಿಶ್ವ ಕಾರ್ಟೂನಿಸ್ಟ್ ದಿನದ ಹಿನ್ನಲೆಯಲ್ಲಿ ಕಾರ್ಟೂನ್ ವಾಚ್ ಮತ್ತಿತ್ತರ ಸಂಸ್ಥೆಗಳು ಏರ್ಪಡಿಸಿದ ರಾಷ್ಟ್ರಮಟ್ಟದ ಕಾರ್ಟೂನ್ ಸ್ಪರ್ಧೆಯಲ್ಲಿ “ಇನ್ ದಿ ಟೈಮ್ ಆಫ್ ವಾರ್,ಸ್ಕಿಪ್ ಫಾರಿನ್ ಟ್ರಾವೆಲ್,ಕಂ ಟು ಬಸ್ತಾರ್, ವೇರ್ ದೇರ್ ಈಸ್ ಪೀಸ್ ಆಂಡ್ ಗ್ರೀನರಿ” ಎಂಬ ವಿಷಯವನ್ನು ನೀಡಲಾಗಿತ್ತು. ಇದರಲ್ಲಿ ರಾಷ್ಟ್ರದ ಪ್ರತಿಭಾನ್ವಿತ ನೂರಾರು ವ್ಯಂಗ್ಯಚಿತ್ರಗಾರರು ಭಾಗಿಯಾಗಿದ್ದು,ಅವರ ಪೈಕಿ ಶೈಲೇಶ್ ಉಜಿರೆ ಮೂರನೇ ಬಹುಮಾನ ಪಡೆದಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಅನ್ ಫೋಲ್ಡ್ ಡ್ರೀಮ್ಸ್ ಆಯೋಜಿಸಿದ್ದ ರಾಷ್ಟ್ರಮಟ್ಟದ ವ್ಯಂಗ್ಯ ಭಾವಚಿತ್ರ ಸ್ಪರ್ಧೆಯಲ್ಲಿ ಉಜಿರೆ ಶೈಲೇಶ್ ಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದರು.ಹಲವಾರು ರಾಷ್ಟ್ರೀಯ ಬಹುಮಾನಗಳನ್ನು ಪಡೆದಿರುವ ಶೈಲೇಶ್ ಉಜಿರೆಯವರು ಈ ಮೂಲಕ ಮತ್ತೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮರೆದಿದ್ದಾರೆ. ಶೈಲೇಶ್ ಉಜಿರೆಯವರು ಸುದ್ದಿ ಬಿಡುಗಡೆಯ ದೀಪಾವಳಿ ಸಂಚಿಕೆಗೆ ಹಲವು ವ್ಯಂಗ್ಯಚಿತ್ರಗಳನ್ನು ಬರೆದು ಸಹಕಾರ ನೀಡಿದ್ದಾರೆ









