ಗೇರುಕಟ್ಟೆ: ಅಲ್ಚೋ ಕಾರು ಪಾದಚಾರಿಗೆ ಡಿಕ್ಕಿ-ಗಂಭೀರ ಗಾಯ

0

ಮಡಂತ್ಯಾರು: ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯ ಹೆದ್ದಾರಿ ಗೇರುಕಟ್ಟೆ ಸಮೀಪದ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪಾದಚಾರಿ ರುಕ್ಮಯ ಗೌಡ (53ವ) ಅವರಿಗೆ ಅತೀ ವೇಗವಾಗಿ ಚಲಿಸುತ್ತಿದ್ದ ಕೆಎಲ್.58ಇ 4633 ನೊಂದಣಿ ಸಂಖ್ಯೆಯ ಅಲ್ಟೋ ಕಾರು ಡಿಕ್ಕಿ ಹೊಡೆದ ಘಟನೆ ಎ.29ರಂದು ರಾತ್ರಿ ನಡೆಯಿತು. ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ವ್ಯಕ್ತಿಗೆ ಡಿಕ್ಕಿ ಹೊಡೆದು ಕಾಲು,ತಲೆ,ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿದೆ. ಸ್ಥಳೀಯರು ತಕ್ಷಣ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ರಾತ್ರಿ ಮಂಗಳೂರು ಆಸ್ಪತ್ರೆಗೆ ಸೇರಿಸಲಾಯಿತು.

ಘಟನೆ ವಿವರ: ಉಪ್ಪಿನಂಗಡಿ ಕಡೆಯಿಂದ ಬಳೆಂಜ ಕಾಫಿನಡ್ಕ ಸಮೀಪದ ನಿವಾಸಿಗಳು ಮೂರು ಕಾರುಗಳು ಒಂದರ ಹಿಂದೆ ಒಂದರಂತೆ ಹಿಂದಿಕ್ಕಿಲು ಭರಾಟೆಯಲ್ಲಿ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಘಟನೆ ನಡೆಯಿತು ಎಂದು ಸ್ಥಳೀಯರು ಹೇಳುತ್ತಾರೆ. ಬೆಳ್ತಂಗಡಿ ಸಂಚಾರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here