






ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದನಗರ ಧರ್ಮಸ್ಥಳ, ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರು, ಅಯೋಧ್ಯೆಯಲ್ಲಿ ಈಗಾಗಲೇ ಜಾಗವನ್ನು ಖರೀದಿ ಮಾಡಿ ಶಾಖಾ ಮಠದ ನಿರ್ಮಾಣದ ಕೈಕಂರ್ಯವನ್ನು ಪ್ರಾರಂಭಿಸಿದ ಶಾಖಾ ಮಠ ನಿರ್ಮಾಣ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ನೇಮಕಗೊಳಿಸಲಾಗಿದೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಘೋಷಣೆ ಮಾಡಿದರು.

ಅವರು ಎ. 25ರಂದು ಕ್ಷೇತ್ರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಘೋಷಣೆ ಮಾಡಿ ಅಯೋದ್ಯೆಯಲ್ಲಿ ನಡೆಯುತ್ತಿರುವ ಶಾಖಾ ಮಠದ ಕಾಮಗಾರಿ ಬಗ್ಗೆ ವಿವರ ನೀಡಿದರು.ಮೂರು ಬಾರಿ ಸತತ ಲೋಕಸಭಾ ಕ್ಷೇತ್ರದ ಸಂಸದರಾಗಿಆಯ್ಕೆಯಾಗಿ, ಒಬ್ಬ ನಿಷ್ಕಳಂಕ, ನಿಷ್ಠಾವಂತ, ಆದರ್ಶ,ಸಜ್ಜನ ರಾಜಕಾರಣಿಯಾಗಿ ಜನಮನ್ನಣೆಯನ್ನುಗಳಿಸಿರುತ್ತಾರೆ.ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ 5 ವರ್ಷಗಳ ಕಾಲ ಇಡೀ ರಾಜ್ಯದಲ್ಲಿ ನಿರಂತರ ಪ್ರವಾಸಮಾಡಿ ಸಂಘಟನೆಯ ಒಬ್ಬ ಉತ್ತಮ ನಾಯಕನೆಂಬಕೀರ್ತಿಗೆ ಪಾತ್ರರಾಗಿರುತ್ತಾರೆ.


ತಾನೊಬ್ಬ ರಾಜಕಾರಣಿಗಿಂತ ಹೆಚ್ಚಾಗಿ ಸನಾತನ ಹಿಂದು ಧರ್ಮದರಕ್ಷಣೆಗಾಗಿ ಅದರ ಅಭ್ಯುದಯಕ್ಕಾಗಿ ಸುಮಾರು150ಕ್ಕೂ ಮಿಕ್ಕಿ ದೇವಸ್ಥಾನಗಳ ಬ್ರಹ್ಮ ಕಲಶಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಇಡೀ ರಾಜ್ಯದ ಜನತೆಯ ಅಮೋಘ ಪ್ರೀತಿಗೆ ಭಾಜನರಾದ ಒಬ್ಬ ಶುದ್ಧ ಹಸ್ತದ ದೈವ ಭಕ್ತ.ಜನನಾಯಕರಾಗಿರುವ ನಳಿನ್ ಕುಮಾರ್ ಮಠದ ಪರಮಾಪ್ತ ಶಿಷ್ಯರಾಗಿದ್ರೂ, ಈಗ ಅಯೋಧ್ಯೆಯಎಲ್ಲಾ ಯುವ ಶಾಖಾ ಮಠಕ್ಕೆ ರಾಷ್ಟ್ರ- ಅಂತರಾಷ್ಟ್ರಮಟ್ಟದಲ್ಲಿ ಶಿಷ್ಯರನ್ನು ಹೊಂದಿರುವ ಈ ಪರಮ ಪವಿತ್ರವಾದ ದೈವೀ ಸಾನಿಧ್ಯವನ್ನು ಹೊಂದಿರುವ ಸಂಸ್ಥೆಗೆ ಇರವರು ಸರ್ವಸಮರ್ಥರೆಂದು ಮನಗಂಡು ಈ ಶ್ರೇಷ್ಠಕಾರ್ಯಕ್ಕೆ ಅವರನ್ನುಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ ಎಂದು ಹೇಳಿದರು.
ಗುರುದೇವ ಮಠದ ಟ್ರಷ್ಟಿಗಳು ಹಾಗೂ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಅಭಿವೃದ್ಧಿ ಸಮಿತಿಯ ಪ್ರಮುಖರಾದ ಪೀತಾಂಬರ ಹೇರಾಜೆ ಬೆಳ್ತಂಗಡಿ, ನಾಗೇಶ್ ಕುಮಾರ್ ಗೌಡ ಕೊಕ್ಕಡ, ಜಯಂತ್ ಕೋಟ್ಯಾನ್ ಮರೋಡಿ, ಸಂಪತ್ ಬಿ ಸುವರ್ಣ ಬೆಳ್ತಂಗಡಿ, ರಾಜೇಶ್ ಪೈ ಉಜಿರೆ, ತಿಮ್ಮಪ್ಪ ಗೌಡ ಬೆಳಾಲು, ರವೀಂದ್ರ ಪೂಜಾರಿ ಆರ್ಲ ,ಕೃಷ್ಣಪ್ಪ ಗುಡಿಗಾರ್, ವಿಕಾಸ್ ಪುತ್ತೂರು, ಶಿವಕಾಂತ್ ಗೌಡ, ರತ್ನಾಕರ ಬುಣ್ಣನ್ ಮರೋಡಿ, ರಾಜೇಶ್ ಪೂಜಾರಿ ವೇಣೂರು, ಸುನೀಲ್ ಕನ್ಯಾಡಿ, ಕೇಶವ ಬಂಗೇರ ಕಳಿಯ, ಹರೀಶ್ ಸುವರ್ಣ ಕನ್ಯಾಡಿ, ಯತೀಶ್ ಸುವರ್ಣ ಕನ್ಯಾಡಿ,ವಿನೋಭಾ ಕಾರಂತ್ ಉಜಿರೆ, ಪುರುಷೋತ್ತಮ ಪೂಜಾರಿ ಧರ್ಮಸ್ಥಳ, ಟ್ರಸ್ಟ್ ಕಾರ್ಯದರ್ಶಿ ತುಕಾರಾಮ ಸಾಲಿಯಾನ್ ಆರ್ಲ,ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು.









