ಧರ್ಮಸ್ಥಳ : ಅಪರಿಚಿತ ವ್ಯಕ್ತಿಯ ಶವ ಪತ್ತೆ: ವಾರೀಸುದಾರರ ಪತ್ತೆಗೆ ಪೊಲೀಸರ ಮನವಿ

0

ಧರ್ಮಸ್ಥಳ: ಧರ್ಮಸ್ಥಳದ ದೇವಸ್ಥಾನದ ರಥಬೀದಿ ರಸ್ತೆಯ ಬದಿಯಲ್ಲಿ ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಏ.15 ರಂದು ಪತ್ತೆಯಾಗಿದೆ. ವ್ಯಕ್ತಿಯು ಯಾವುದೋ ದೀರ್ಘಕಾಲದ ಕಾಯಿಲೆಯಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.

ಮೃತದೇಹದ ಬಳಿ ಕಪ್ಪು ಬಣ್ಣದ ಫ್ರೇಮ್ ಇರುವ ಕನ್ನಡಕ ಪತ್ತೆಯಾಗಿದೆ. ಎತ್ತರ 5.5 ಅಡಿ.ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ. ಬಿಳಿ ಮತ್ತು ಕಪ್ಪು ಮಿಶ್ರಿತ ಗಡ್ಡ-ಮೀಸೆ ಹಾಗೂ ತಲೆಕೂದಲು. ಎದೆಯ ಬಲಭಾಗದಲ್ಲಿ ಕಪ್ಪು ಎಳ್ಳು ಮಚ್ಚೆ ಇದೆ. ಬಲಗೈ ಮೇಲೆ ಇಂಗ್ಲಿಷ್‌ನಲ್ಲಿ ‘SN’ ಎಂದು ಹಚ್ಚೆ (Tattoo) ಹಾಕಲಾಗಿದೆ. ಕೇಸರಿ ಬಣ್ಣದ ಅರ್ಧ ತೋಳಿನ ಟಿ-ಶರ್ಟ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಮತ್ತು ಬರ್ಮುಡಾ ಚಡ್ಡಿ ಧರಿಸಿದ್ದರು.

ಅಲ್ಲದೆ ಡೈಪರ್ ಕೂಡ ಧರಿಸಿಕೊಂಡಿದ್ದರು.ಮಾಹಿತಿ ಲಭ್ಯವಾದಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಧರ್ಮಸ್ಥಳ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.ಧರ್ಮಸ್ಥಳ ಪೊಲೀಸ್ ಠಾಣೆ: 08256-277253PSI ಧರ್ಮಸ್ಥಳ: 77954 24204, 82779 86449CPI ಬೆಳ್ತಂಗಡಿ: 94808 05336ಜಿಲ್ಲಾ ನಿಯಂತ್ರಣ ಕೊಠಡಿ: 0824-2220500ಇಮೇಲ್: [email protected]

LEAVE A REPLY

Please enter your comment!
Please enter your name here