ಲಾಯಿಲ ಗ್ಯಾಸ್ ಸಿಗದೆ ಜನರ ಪರದಾಟ-ಕಚೇರಿಗೆ ಬಂದು ಗಲಾಟೆ

0

ಬೆಳ್ತಂಗಡಿ: ಲಾಯಿಲದಲ್ಲಿರುವ ಶ್ರೀ ಮಂಜು ಇಂಡಿಯನ್ ಗ್ಯಾಸ್ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಹಕರು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಏ. 18 ರಂದು ನಡೆದಿದೆ. ಗ್ಯಾಸ್ ಬುಕ್ ಮಾಡಿ ತುಂಬಾ ದಿನಗಳಾದರೂ ಗ್ಯಾಸ್ ಸಿಗುತ್ತಿಲ್ಲ.

ಏಜೆನ್ಸಿಯವರು ತಮಗೆ ಬೇಕಾದವರಿಗೆ ಗ್ಯಾಸ್ ನೀಡುತ್ತಿದ್ದಾರೆ. ಹೀಗಾಗಿ ಮನೆ ಬಳಕೆಯ ಗ್ಯಾಸ್ ಸಿಗುತ್ತಿಲ್ಲ ಎಂದು ಆರೋಪಿಸಿ ನೂರಾರು ಗ್ರಾಹಕರು ಕಚೇರಿಯಲ್ಲಿ ಗಲಾಟೆ ನಡೆಸಿದ್ದಾರೆ. ಮಾರ್ಚ್ ಕೊನೆಯ ವಾರ ಹಾಗೂ ಎಪ್ರಿಲ್ ಮೊದಲ ವಾರದಲ್ಲಿ ಹೆಚ್ಚಿನ ಗ್ರಾಹಕರು ಗ್ಯಾಸ್ ಬುಕ್ ಮಾಡಿದ್ದರು. ಸಾಕಷ್ಟು ಸಲ ಕಚೇರಿಗೆ ಬಂದು ವಿಚಾರಿಸಿದರೂ ಗ್ಯಾಸ್ ಸದ್ಯಕ್ಕೆ ಇಲ್ಲ ಎಂದು ಹೇಳಿ ಸತಾಯಿಸುತ್ತಿದ್ದಾರೆ. ನಮ್ಮ ಗ್ಯಾಸ್ ಅನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದರು. ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಬೇರೆ ಕಡೆ ಸಮಸ್ಯೆ ಆಗುತ್ತಿಲ್ಲ.

ಬೆಳ್ತಂಗಡಿಯ ಶ್ರೀ ಮಂಜು ಇಂಡಿಯನ್ ಏಜೆನ್ಸಿಯಲ್ಲಿ ಮಾತ್ರ ಸಮಸ್ಯೆ ಆಗುತ್ತಿದೆ. ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಇಲ್ಲಿ ಮನೆ ಬಳಕೆಗೆ ಬರುವ ಗ್ಯಾಸ್‌ಗಳನ್ನು ಹೋಟೆಲ್ ಸೇರಿದಂತೆ ವಾಣಿಜ್ಯ ಬಳಕೆಗಾಗಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಅವ್ಯವಹಾರ ನಡೆಸುವುದರಿಂದಲೇ ಈ ಸಮಸ್ಯೆ ಉಂಟಾಗಿದೆ ಎಂದು ಗ್ರಾಹಕರು ಆಕ್ರೋಶ ಹೊರ ಹಾಕಿದರು.

LEAVE A REPLY

Please enter your comment!
Please enter your name here