







ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ತುರ್ತು ನಿರ್ವಹಣಾ ಕಾಮಗಾರಿಗಳು ಹಾಗೂ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿರುವುದರಿಂದ, ಏಪ್ರಿಲ್ 16ರ ಗುರುವಾರದಂದು ಬೆಳ್ತಂಗಡಿ ಮತ್ತು ಧರ್ಮಸ್ಥಳ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಬೆಳ್ತಂಗಡಿ 33/11ಕೆವಿ ಉಪಕೇಂದ್ರದ 33ಕೆವಿ ಭೂಗತ ಕೇಬಲ್ ಚೇತನಗೊಳಿಸುವಿಕೆ, ಹೊಸ 11ಕೆವಿ ಲಿಂಕ್ ಲೈನ್ ಕಾಮಗಾರಿ ಹಾಗೂ ಲೈನ್ಗಳಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆಯಲಿದೆ.ವಿದ್ಯುತ್ ಸ್ಥಗಿತಗೊಳ್ಳುವ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ.ಬಾಧಿತವಾಗುವ ಪ್ರದೇಶಗಳು (ಫೀಡರುಗಳು):ಬೆಳ್ತಂಗಡಿ ಕೇಂದ್ರದಿಂದ: ಕೊಲ್ಲಿ, ಬಂಗಾಡಿ, ಕೊಯ್ಯರು, ಉಜಿರೆ, ಬೆಳಾಲು, ಲ್ಯಾಲ, ಕುವೆಟ್ಟು, ಗೇರುಕಟ್ಟೆ, ಮಡಂತ್ಯಾರು ಹಾಗೂ ಬಳ್ಳಮಂಜ. ಧರ್ಮಸ್ಥಳ ಕೇಂದ್ರದಿಂದ: ಧರ್ಮಸ್ಥಳ ಟೆಂಪಲ್, ಕನ್ಯಾಡಿ, ಪುದುವೆಟ್ಟು, ಅರಸಿನಮಕ್ಕಿ, ನಿಷ್ಠೆ ಮತ್ತು ಪಟ್ರಮೆ.ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಈ ಕಾಮಗಾರಿಗೆ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.








