







ನಾವೂರು: ಇಲ್ಲಿನ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ‘ಪರಾಭವ’ ನಾಮ ಸಂವತ್ಸರದ ಸೌರಮಾನ ಯುಗಾದಿ ಹಾಗೂ ವಿಷು ಹಬ್ಬವನ್ನು ಭಕ್ತಿ ಸೌರಭದೊಂದಿಗೆ ಏ.15 ರಂದು ಆಚರಿಸಲಾಯಿತು.

ದಿನದ ಆರಂಭದಲ್ಲಿ ಭಕ್ತರಿಗಾಗಿ ಮನಮೋಹಕ ‘ವಿಷು ಕಣಿ ದರ್ಶನ’ ಏರ್ಪಡಿಸಲಾಗಿತ್ತು. ಬಳಿಕ ಸಾಮೂಹಿಕ ‘ವಿಷ್ಣು ಸಹಸ್ರನಾಮ ಪಠಣ’ ಹಾಗೂ ಸೌರಮಾನ ಯುಗಾದಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ಅರ್ಚಕ ದಿನೇಶ್ ಭಟ್ ಅವರು ವೈದಿಕ ವಿಧಿಗಳನ್ನು ನೆರವೇರಿಸಿದರೆ, ಡಾ. ಪ್ರದೀಪ್ ಆಟಿಕುಕ್ಕೆ ಅವರು ವಿಷ್ಣು ಸಹಸ್ರನಾಮ ಪಠಣದ ನೇತೃತ್ವ ವಹಿಸಿದ್ದರು.


ಅಂತರ್ಜಾಲದ ಮೂಲಕವೂ ದೇಶ-ವಿದೇಶಗಳ ಭಕ್ತರು ಈ ಪಠಣದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಪುಸ್ತಕ ವಿತರಣೆ ಮತ್ತು ಸಂದೇಶ:ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುವ ನಿಟ್ಟಿನಲ್ಲಿ ‘ರಾಮಾಯಣ’ ಪುಸ್ತಕಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬೆಳ್ತಂಗಡಿ ಗುರುದೇವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೃಷ್ಣಪ್ಪ ಪೂಜಾರಿಯವರು, ವಿಷು ಕಣಿಯ ಮಹತ್ವ ಹಾಗೂ ಹಬ್ಬದ ಆಶಯದ ಬಗ್ಗೆ ಮಾತನಾಡಿದರು.

ನಾವೂರು ದೇವಸ್ಥಾನದ ಮೂಲಕ ನಡೆಯುತ್ತಿರುವ ಧರ್ಮ ಶಿಕ್ಷಣ ಕಾರ್ಯಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೇರಲಿ ಎಂದು ಅವರು ಶುಭ ಹಾರೈಸಿದರು.
ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ಪೂರ್ವಾಧ್ಯಕ್ಷ ಎ.ಬಿ. ಉಮೇಶ್ ಅತ್ಯಡ್ಕ ಹಾಗೂ ಟ್ರಸ್ಟಿಗಳಾದ ಗಣೇಶ್ ಕಣಾಲು, ಗಣೇಶ್ ಗೌಡ ಉಪಸ್ಥಿತರಿದ್ದರು. ಅಲ್ಲದೆ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕ ಎಸ್.ಎನ್. ಭಟ್, ಮೋಹನ್ ಬಂಗೇರ, ದೀನೇಶ್ ಗೌಡ ಮಲವಂತಿಗೆ, ಯತೀಶ್ ಕಣಾಲು, ಡಾ. ಕವಿತಾ ಸೇರಿದಂತೆ ಊರಿನ ಅನೇಕ ಗಣ್ಯರು ಭಾಗವಹಿಸಿದ್ದರು. ರಾಜೇಂದ್ರ ಆಚಾರ್ಯ ಮತ್ತು ಬಳಗದವರು ಆಕರ್ಷಕ ವಿಷು ಕಣಿಯನ್ನು ಸಿದ್ಧಪಡಿಸಿದ್ದರು.









