






ಚಂದ್ಕೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಂದ್ಕೂರು ಇಲ್ಲಿ ಭಕ್ತಿ ಮತ್ತು ಸಂಸ್ಕೃತಿಯ ಸಂಗಮವಾದ ಒಂದು ಭವ್ಯ ಧಾರ್ಮಿಕ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ.


ಗ್ರಾಮಸ್ಥರ ಹಾಗೂ ಭಕ್ತಾದಿಗಳ ಪೂರ್ಣ ಸಹಕಾರದೊಂದಿಗೆ ಈ ವಿಶೇಷ “ಭಜನಾ ಕಮ್ಮಟೋತ್ಸವ” ಏಪ್ರಿಲ್ 18 ರಂದು ಶನಿವಾರ ಸಂಜೆ 6:00 ಗಂಟೆಗೆ ನಡೆಯಲಿದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಂದ್ಕೂರು ಭಜನಾ ಗಾಯನ ನಡೆಯಲಿದೆ.ನಡ ಲಾಯಿಲ ಹಾಗೂ ಊರ ಪರವೂರ ಭಕ್ತ ಮಹಾಜನರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಈ ಕಾರ್ಯಕ್ರಮವು ನೆರವೇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಲು ವಿನಂತಿಸಲಾಗಿದೆ









