






ಬೆಳ್ತಂಗಡಿ: ತಾಲೂಕಿನ ಕದಿರುದ್ಯಾವರ ಗ್ರಾಮದ ಹೇದ್ಯದಲ್ಲಿ ಏಪ್ರಿಲ್ 11 ರಂದು ಉತ್ಸಾಹಿ ಗೆಳೆಯರ ಬಳಗ (ರಿ.) ಇವರ ಆಶ್ರಯದಲ್ಲಿ ‘ಉತ್ಸಾಹಿ ಟ್ರೋಫಿ-2026’ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಜರುಗಿತು.

ವಾಲಿಬಾಲ್ ಕ್ರೀಡಾಂಗಣದ ನೂತನ ಹೈ ಮಾಸ್ಟ್ ಲೈಟಿಂಗ್ ವ್ಯವಸ್ಥೆಯ ಲೋಕಾರ್ಪಣೆ ಹಾಗೂ ಕ್ರೀಡಾಕೂಟದ ಉದ್ಘಾಟನಾ ಶಾಸಕ ಹರೀಶ್ ಪೂಂಜಾ ನೆರವೇರಿಸಿದರು.


ರತ್ನಾಕರ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೇಸರ ಕಿಶೋರ್ ಕುಮಾರ್, ಕಡಿರುದ್ಯಾವರ ಪಂಚಾಯತ್ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್, ಬಾಲಚಂದ್ರ ನಾಯಕ್, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಆನಂದ ಗೌಡ ಬರಮೇಲು, ಜನಾರ್ಧನ ಗೌಡ, ಕಡಿರುದ್ಯಾವರ ಪಂಚಾಯತ್ ಮಾಜಿ ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಗೌಡ, ಕಡಿರುದ್ಯಾವರ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಕೆ, ಕಡಿರುದ್ಯಾವರ ವನದುರ್ಗ ದೇವಿ ದೇವಸ್ಥಾನದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ,ಕಡಿರುದ್ಯಾವರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಬೇಬಿ, ಮಠ ಅಂಗನವಾಡಿ ಕಾರ್ಯಕರ್ತೆ ಭಾರತಿ, ವಸಂತ ಗೌಡ, ಗಂಗಯ್ಯ ಗೌಡ ಉಪಸ್ಥಿತರಿದ್ದರು.
ಆನಂದ ಗೌಡ ಸ್ವಾಗತಿಸಿ, ನಾರಾಯಣ ಪೂಜಾರಿ ಹಾಗೂ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು, ಬಾಲಚಂದ್ರ ನಾಯಕ್ ಧನ್ಯವಾದ ನೀಡಿದರು.-ಪ್ರಥಮ ಬಹುಮಾನ ತ್ರಿಶೂಲ್ ಎಲೆಕ್ಟ್ರಾನಿಕ್ಸ್ ಮಾಲಕತ್ವದ ತ್ರಿಶೂಲ್ ಪ್ರೆಂಡ್ಸ್ ಹೇಡ್ಯ -ದ್ವಿತೀಯ ಬಹುಮಾನ ಕಾಂಜಲ್ ಪ್ರೆಂಡ್ಸ್ ಕಾಂಜಲ್ -ತೃತೀಯ ಬಹುಮಾನ ತತ್ವಮಸಿ ಮಾಚಾರು ಎ -ಚತುರ್ಥ ಬಹುಮಾನ ತತ್ವಮಸಿ ಮಾಚಾರು ಬಿ -ಬೆಸ್ಟ್ ಅಟಾಕರ್ ತ್ರಿಶೂಲ್ ಪ್ರೆಂಡ್ಸ್ ತಂಡದ ಆಟಗಾರರಾದ ಚರಣ್ ಗೌಡ -ಬೆಸ್ಟ್ ಪಾಸಾರ್ ಆಗಿ ತ್ರಿಶೂಲ್ ಪ್ರೆಂಡ್ಸ್ ತಂಡದ ಆಟಗಾರರಾದ ರಮಾನಂದ ರಂಜು-ಆಲ್ ರೌಂಡರಾಗಿ ಕಾಂಜಲ್ ಪ್ರೆಂಡ್ಸ್ ಕಾಂಜಲ್ ತಂಡದ ಆಟಗಾರರಾದ ಜಿಯೋ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.









