ಮಾಚಾರು ನೂತನ ಮದ್ರಸ ಕಟ್ಟಡ ಉದ್ಘಾಟನೆ

0

ಉಜಿರೆ :ಮುಹ್ಯದ್ದೀನ್ ಜುಮಾ ಮಸ್ಜಿದ್ ಹಾಗೂ ಮುಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್ ಮಾಚಾರ್ ಇದರ ಅಧೀನದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಮದ್ರಸ ಕಟ್ಟಡವನ್ನು ಎ.8 ರಂದು ಮಗ್ರಿಬ್ ನಮಾಝಿನ ಬಳಿಕ ಅಸ್ಸಯ್ಯದ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ರವರ ಪುತ್ರ ಅಬ್ದುರ್ರಹ್ಮಾನ್ ಮಶ್‌ಹೂದ್ ತಂಙಳ್ ಅಲ್- ಬುಖಾರಿ ಕೂರತ್ ರವರು ಉದ್ಘಾಟಿಸಿ ಮಕ್ಕಳಿಗೆ ಅಕ್ಷರಗಳನ್ನು ಬರೆದು ಅಧಿಕೃತವಾಗಿ ಚಾಲನೆ ನೀಡಿದರು.

ಮದ್ರಸಕ್ಕೆ ಸಹಕರಿಸಿದ ಸರ್ವರಿಗೂ ತಂಙಳ್ ರವರು ಪ್ರಾರ್ಥನೆ ನಡೆಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಬಿ.ಎಮ್. ಇಲ್ಯಾಸ್ ವಹಿಸಿದರು, ಸದರ್ ಮುಅಲ್ಲಿಮ್ ಹೈದರ್ ಹಿಷಾಮಿ ಸ್ವಾಗತಿಸಿದರು, ಸಮಾರಂಭವನ್ನು ಮಲ್‌ಜ‌ಅ್ ಸಾರಥಿ ಅಸ್ಸಯ್ಯದ್ ಉಜಿರೆ ತಂಙಳ್ ರವರು ಉದ್ಘಾಟಿಸಿದರು, ಖ್ಯಾತ ವಾಗ್ಮಿ ಶಾಕಿರ್ ಬಾಖವಿ ಅಲ್-ಅರ್ಷದಿ ಮಂಬಾಡ್ ರವರು ಮುಖ್ಯ ಪ್ರಭಾಷಣ ನಡೆಸಿದರು.

ದ. ಕ. ಜಿಲ್ಲಾ ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು, ಸಮಾರಂಭದಲ್ಲಿ ಸಯ್ಯದ್ ಎಸ್ ಎಮ್ ಕೋಯ ತಂಙಳ್ ಉಜಿರೆ, ಖತೀಬ್ ಉಸ್ತಾದ್ ಸಲೀಮ್ ಸಖಾಫಿ ಭದ್ರಾವತಿ,ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಬೆಳಾಲು ಉಸ್ತುವಾರಿಗಳಾದ ಆದಮ್ ಟಿ.ಎಚ್, ಪಳ್ಳಿದಡ್ಕ ಅಧ್ಯಕ್ಷ ಹಕೀಮ್ ಮದನಿ , ಪಳ್ಳಿದಡ್ಕ ಸದರ್ ಮುಅಲ್ಲಿಮ್ ಮಜೀದ್ ಮುಸ್ಲಿಯಾರ್, ಅಕ್ಬರ್ ಅಲಿ ಬಂಡಸಾಲೆ, ಕೋಶಾಧಿಕಾರಿ ಹಸೈನಾರ್ ಟೈಲ್ಸ್, ಉಪಾಧ್ಯಕ್ಷ ಸಲೀಮ್ ಅಂಗಡಿ ಸಹಿತ ಎಸ್ ಎಸ್ಎಫ್, ಎಸ್ ವೈ ಎಸ್, ಕೆ ಎಂ ಜೆ, ನಾಯಕರು ಉಪಸ್ತಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here